Site icon Kundapra.com ಕುಂದಾಪ್ರ ಡಾಟ್ ಕಾಂ

ಜೆ.ಇ.ಇ.(ಬಿ.ಆರ್ಕ್) ಫಲಿತಾಂಶ ಪ್ರಕಟ: ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ದೇಶದ ಪ್ರತಿಷ್ಠಿತ ಆರ್ಕಿಟೆಕ್ಚರ್ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ.(ಬಿ. ಆರ್ಕ್ )2025 ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಮೋಹಿತ್-99.40 ಪರ್ಸೆಂಟೈಲ್ ನೊಂದಿಗೆ  ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಎರಡರಲ್ಲೂ ರಾಷ್ಟ್ರಕ್ಕೆ ಕೆಟಗರಿ ವಿಭಾಗದಲ್ಲಿ ಆರನೇ ರ‍್ಯಾಂಕ್ ಗಳಿಸಿ ವಿಶಿಷ್ಟಸಾಧನೆಗೈದಿದ್ದಾರೆ.  

ವಿದ್ಯಾರ್ಥಿಗಳಾದ ತೇಜಸ್ ವಿ. ನಾಯಕ್ (ಎಐಆರ್‌ 101), ಟಿ. ಪ್ರದೀಪ್ (ಎಐಆರ್‌  117), ಮೋನಿಕಾ ಕೆ. ಎ (ಎಐಆರ್‌ 140), ಸುಧಾಂಶು ಪಾಲೇಕರ್ (ಎಐಆರ್‌ 268), ಪ್ರತಿಕ್ ಎನ್. ಶೆಟ್ಟಿ (ಎಐಆರ್‌ 362), ತ್ರಿಶ್ಲಾ ಗಾಂಧಿ (ಎಐಆರ್‌ 423), ರೋಹಿತ್ ಜಿ. ಬಿ. (ಎಐಆರ್‌ 461), ಸಾಚಿ ಶಿವಕುಮಾರ್ (ಎಐಆರ್‌ 484), ಚಿನ್ಮಯಿ ಆರ್ (ಎಐಆರ್‌ 519), ಮನೋಜ್ ಎಂ. ಆರ್ (ಎಐಆರ್‌ 846), ಚೇತನ್ ಗೌಡ (ಎಐಆರ್‌ 867), ಆಕಾಶ್ ದೇವಾಡಿಗ (ಎಐಆರ್‌ 980) ಕೆಟಗರಿ ವಿಭಾಗದಲ್ಲಿ ರ‍್ಯಾಂಕ್ ಗಳಿಸಿದ್ದಾರೆ.

500 ರ‍್ಯಾಂಕ್ ಒಳಗೆ 10 ಮಂದಿ, 1000 ರಾಂಕ್ ಒಳಗೆ 14 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಪಡೆಯುವ ಮೂಲಕ ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಗಳಿಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾದ ಐ.ಐ.ಟಿ. ಹಾಗೂ ಇನ್ನಿತರ ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಬಿ. ಆರ್ಕ್ ಕೋರ್ಸಿಗೆ ಪ್ರವೇಶ ಪಡೆಯಲು ಈ ಪರೀಕ್ಷೆಗೆ ಕ್ರಿಯೇಟಿವ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಾ ಬಂದಿದ್ದು ಸಂಸ್ಥೆಯು ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಹಾಗೂ ಜೆ.ಇ.ಇ. ಬಿ. ಆರ್ಕ್ ಪರೀಕ್ಷೆಯ ಸಂಯೋಜಕರಾದ ಸುಮಂತ್ ದಾಮ್ಲೆ, ರಕ್ಷಿತ್ ಬಿ.ಎಸ್, ಶರತ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version