Site icon Kundapra.com ಕುಂದಾಪ್ರ ಡಾಟ್ ಕಾಂ

ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ: ಡಾ. ಕೆ. ಸಿ. ಬಸವರಾಜು

ಮೂಡುಬಿದಿರೆ: ಕರ್ನಾಟಕದ ಬಹುಭಾಗ ಒಂದೊಂದು ಹನಿಗೂ ಪರಿತಪಿಸುವ ಸ್ಥಿತಿ ಇದೆ. ಸಮೃದ್ಧ ಬದುಕನ್ನು ಉಂಡ ಕೋಲಾರ ಜಿಲ್ಲೆಯಲ್ಲಿ ಎರಡು ಸಾವಿರ ಅಡಿ ಕೆಳಗೆ ಹೋದರೂ ನೀರು ಸಿಗುತ್ತಿಲ್ಲ. ಸಮುದ್ರಕ್ಕೆ ಸೇರುವ ನೀರಿನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಕೆ. ಸಿ. ಬಸವರಾಜು ಹೇಳಿದರು.

ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ನೀರಿನ ಬಳಕೆ ಮತ್ತು ಹಂಚಿಕೆ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ಕಾವೇರಿ ನದಿಯ ಕುರಿತು ಮಾತನಾಡಿದರು. ಪ್ರತಿಭಾರಿಗೂ ನೀರು ಹಂಚಿಕೆಯ ವಿಷಯದಲ್ಲಿ ಕರ್ನಾಟಕ್ಕೆ ಅನ್ಯಾಯವಾಗುತಿದೆ. ರಾಜಕಾರಣಿಗಳು ನಮ್ಮ ಬದುಕನ್ನೇ ನಾಶಮಾಡುತ್ತಿದ್ದಾರೆ. ನ್ಯಾಯಾಧಿಕರಣ ಕೂಡ ನೈಸರ್ಗಿಕ ತೀರ್ಪಿನ ವಿರುದ್ದ ಹಂಚಿಕೆ ಮಾಡಿದೆ ಎಂದವರು ಹೇಳಿದರು.

Exit mobile version