ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಐದಾರು ವರ್ಷಗಳಿಂದ ಟೀಮ್ ಊರ್ಮನಿ ಮಕ್ಕಳ್ ತಂಡವು ಸಮಾಜಕ್ಕೆ ಮಾದರಿಯಾಗುತ್ತಿದೆ. ಕಲಾವಿದರ ಪ್ರೊತ್ಸಾಹ ಜೊತೆಗೆ ಸಮಾಜ ಸೇವೆಯಲ್ಲಿ ತನ್ನದೆ ಆದಂತ ವಿಶಿಷ್ಟ ಕಾರ್ಯಗಳನ್ನು ಈ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ.
ನಾಲೈದು ತಿಂಗಳ ಹಿಂದೆಯಷ್ಟೆ ವಯೋವೃದ್ದ ಸುಮಾರು ಹದಿಮೂರು ಜನಕ್ಕೆ ವಾಕರ್ ಸ್ಟಿಕ್ ಹಂಚಿಕೆ ಮಾಡಿದ್ದಾರೆ. ಈ ಬಾರಿ ಸುಮಾರು ಹದಿನೈದಕ್ಕೂ ಹೆಚ್ಚು ಆಯ್ದ ಬಡ ಕೂಲಿಕಾರ್ಮಿಕರ 1 ರಿಂದ 10ನೇ ತರಗತಿಯ ಮಕ್ಕಳಿಗೆ ಸಂಪೂರ್ಣ ನೊಟ್ಸ್ ಪುಸ್ತಕ, ಪೆನ್ನು ಡ್ರಾಯಿಂಗ್ ಬುಕ್, ಪೆನ್ಸಿಲ್, ಕಾಪಿಬುಕ್, ಮಗ್ಗಿಪುಸ್ತಕ, ಸ್ಕೆಚ್ ಪೆನ್ನು ಮತ್ತು ಇತರ ಕಲಿಕಾ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳ ಮನೆಗಳಿಗೆ ಹೋಗಿ ವಿತರಿಸಿ, ಒಂದಿಷ್ಟು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುವಲ್ಲಿ ಕಾರಣಿಕರ್ತರಾದರು.
ಟೀಮ್ ಊರ್ಮನಿ ಮಕ್ಕಳ್ ತಂಡದ ನಿರ್ವಾಹಕರೂ ಹಾಗೂ ಆಟೊ ಚಾಲಕರು ಆದಂತಹ ನಾಗೇಶ್ ಗಾವಳಿ ಅವರು ತಮ್ಮ ಸ್ವಂತ ಸಂಪಾದನೆಯಲ್ಲಿ ಒಂದಿಷ್ಟು ಹಣವನ್ನು ಕೂಡಿಟ್ಟು ಇಂದು ವಿದ್ಯಾರ್ಥಿಗಳಿಗೆ ನೋಟ್ಸ್ ಹಂಚಿಕೆಗೆ ಸಂಪೂರ್ಣ ಸಹಕಾರ ನೀಡಿದ್ದು ಹೆಮ್ಮೆಯ ವಿಷಯ.
ಈ ಸಂದರ್ಭದಲ್ಲಿ ಟೀಮ್ ಊರ್ಮನಿ ಮಕ್ಕಳ್ ತಂಡದ ಕೃಷ್ಣ ಕೊರ್ಗಿ, ಸಂತೋಷ ಕೊರ್ಗಿ, ನಾಗೇಶ್ ಗಾವಳಿ, ಚಂದ್ರ ಕೊರ್ಗಿ, ಗಣೇಶ ಕೊರ್ಗಿ,ನಾಗೇಶ್ ಸಿದ್ದಾಪುರ, ಕಿಶೋರ್ ಕೊರ್ಗಿ, ನೇತ್ರ ಕೊರ್ಗಿ, ವಿಧ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಿದ್ದರು.

