Site icon Kundapra.com ಕುಂದಾಪ್ರ ಡಾಟ್ ಕಾಂ

ಮೂಡ್ಲಕಟ್ಟೆ: ಹೈ ರಿಸ್ಕ್ ಅಂಡ್ ಕ್ರಿಟಿಕಲ್ ಕೇರ್ ಒಬ್ಸೆಟ್ರಿಕ್ಸ್ ಕುರಿತು ಪ್ರಾದೇಶಿಕ ಸಮ್ಮೇಳನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ “ಹೈ ರಿಸ್ಕ್ ಅಂಡ್ ಕ್ರಿಟಿಕಲ್ ಕೇರ್ ಒಬ್ಸೆಟ್ರಿಕ್ಸ್” ಕುರಿತು ಪ್ರಾದೇಶಿಕ ಸಮ್ಮೇಳನವನ್ನು ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.  

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ , ಫಾದರ್ ಮುಲ್ಲರ್ ಕಾಲೇಜಿನ ಪ್ರಾಧ್ಯಾಪಕಿಯಾದ ಡಾ. ರೀನಾ ವಿಲ್ಟಾ  ಪ್ರಾಂಕ್, ಐಎಂಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ, ಮತ್ತು  ಉಪ ಪ್ರಾಂಶುಪಾಲರಾದ ರೂಪಶ್ರೀ ಕೆ. ಎಸ್. ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಮಕೃಷ್ಣ ಹೆಗಡೆ ಅವರು ಸಮ್ಮೇಳನವನ್ನು ಆಯೋಜಿಸಿದ ಎಂಸಿಎನ್ ನ ಪ್ರಾಧ್ಯಾಪಕರಿಗೆ ಹಾಗೂ ಸಮ್ಮೇಳನಗಳನ್ನು ನಡೆಸಲು ಬಹಳ ಉತ್ತೇಜನ ನೀಡುತ್ತಿರುವ ಐಎಂಜೆ ಇನ್ಸ್ಟಿಟ್ಯೂಷನ್ಸ್ ಛೇರ್ಮನ್ ರಾದ ಸಿದ್ದಾರ್ಥ ಶೆಟ್ಟಿ ಅವರಿಗೆ ಅಭಿನಂದಿಸಿದರು.

ಸಭಾ ಕಾರ್ಯಕ್ರಮದನಂತರ  ಆಹ್ವಾನಿತ ವಿಷಯ ತಜ್ಞ ರಿಂದ ವಿಚಾರ ಮಂಡನೆ ನಡೆಯಿತು. ಮೊದಲನೆಯವರಾಗಿ ಡಾ. ರೀನಾ ವಿಲ್ಮಾ ಪ್ರಾಂಕ್  ಅವರು “ಪ್ರಸೂತಿಯಲ್ಲಿ ಕೃತಕ ಬುದ್ಧಿಮತ್ತೆ” ಎನ್ನುವ ವಿಷಯವನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ಡಾ. ಸೋನಿಯಾ ಆರ್ ಬಿ ಡಿಸೋಜ ಹಾಗು ರಂಜನಿ ಪಿ (ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್) ಅವರು “ಗರ್ಭಾವಸ್ಥೆಯಲ್ಲಿ ತೀವ್ರ ರಕ್ತದೊತ್ತಡ ನಿರ್ವಹಣೆ”ಯ ಕುರಿತು ಪ್ರಾಯೋಗಿಕವಾಗಿ ಭಾಗಿಯಾದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ತಿಳಿಸಿದರು.

ಅಪರಾಹ್ನ ಡಾ. ಪ್ರಿಯಾಂಕ ಜೋಗಿ ಅವರು (ಸ್ತ್ರೀ ರೋಗ ತಜ್ಞರು,  ನವಮಾಸ ಕ್ಲಿನಿಕ್ ) ಶೋಲ್ಡರ್ ಡಿಸ್ಟ್ರೊಶಿಯಾದ ಬಗ್ಗೆ ವಿಚಾರ ಮಂಡಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದವರಿಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ರೂಪಶ್ರೀ ಕೆ.ಎಸ್. ಅವರು ಪ್ರಮಾಣ ಪತ್ರವನ್ನು ವಿತರಿಸಿದರು.  

ಕಾರ್ಯಕ್ರಮದಲ್ಲಿ ಹಲವು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸೆರೆನಾ ನಿರೂಪಿಸಿ, ಮಂಜುನಾಥ್ ವಂದಿಸಿದರು.

Exit mobile version