Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ತಾಲೂಕು ಸವಿತಾ ಸಮಾಜದ ವಾರ್ಷಿಕ ಮಹಾಸಭೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕು ಸವಿತಾ ಸಮಾಜದ ವಾರ್ಷಿಕ ಮಹಾ ಸಭೆಯು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತ ಸಿರಿ ಸಭಾಭವನ ಉಪ್ಪುಂದದಲ್ಲಿ ಇತ್ತೀಚಿಗೆ ಜರುಗಿತು.

ಇದರ ಅಧ್ಯಕ್ಷತೆಯನ್ನು ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಪ್ರಶಾಂತ್ ಭಂಡಾರಿ ಬೈಂದೂರು ವಹಿಸಿದ್ದರು. ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷರು, ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿ ಅಂಬಲಪಾಡಿ ಉಡುಪಿ ಇದರ ಉಪಾಧ್ಯಕ್ಷರಾದ ಬನ್ನಂಜೆ ಗೋವಿಂದ ಭಂಡಾರಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಕೊಡೆ, ನೋಟ್ಸ್ ಪುಸ್ತಕವನ್ನು ವಿತರಿಸಲಾಯಿತು. ಶೇಕಡ 80ಕ್ಕಿಂತ ಅಧಿಕ ಅಂಕ ಪಡೆದ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಎಸ್ಎಸ್ಎಲ್‌ಸಿ ಯಲ್ಲಿ 613 ಅಂಕ ಪಡೆದ ಗೌತಮಿ ಗೋಪಾಲ ಭಂಡಾರಿ ಕಂಚಿ ಕಾನ್ ಬಿಜೂರು ಮತ್ತು 591 ಅಂಕಗಳಿಸಿದ ಪೃಥ್ವಿರಾಜ್ ನಾಗರಾಜ್ ಭಂಡಾರಿ ಸಾಲಿಮಕ್ಕಿ ಬಿಜೂರು ಅವರನ್ನು ಸನ್ಮಾನಿಸಲಾಯಿತು. ಪಿಯುಸಿಯಲ್ಲಿ 88 ಶೇಕಡ ಅಂಕಗಳಿಸಿದ ಪ್ರಜ್ಞಾ ರಾಜು ಸುವರ್ಣ ಬೈಂದೂರು ಅವರನ್ನು ಕೂಡ ಗೌರವಿಸಲಾಯಿತು.

ತಾಲೂಕು ಸವಿತಾ ಸಮಾಜದ ಹಿರಿಯ ವೃತ್ತಿ ಬಾಂಧವರಾದ ಮಾಧವ ಭಂಡಾರಿ ಬೈಂದೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೈಂದೂರು ತಾಲೂಕು ಸವಿತಾ ಸಮಾಜದ ವತಿಯಿಂದ ನೀಡಲ್ಪಡುವ ಸ್ವಚ್ಛ ಸಲೂನ್ ಪ್ರಶಸ್ತಿಯನ್ನು ಉಪ್ಪುಂದ ವಲಯ ಸವಿತಾ ಸಮಾಜದ ರಾಜು ಸುವರ್ಣ ಬೈಂದೂರು ಹಾಗೂ ನಾಗೂರು ವಲಯ ಸವಿತಾ ಸಮಾಜದ ಉದಯ ಸುವರ್ಣ ಮರವಂತೆ ಅವರಿಗೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸವಿತಾ ಸಮಾಜ ವಿದೋದ್ದೇಶ ಸೌಹಾರ್ದ ಸಹಕಾರಿ ಅಂಬಲಪಾಡಿ ಉಡುಪಿ ಇದರ ಅಧ್ಯಕ್ಷರಾದ ಪ್ರೊಫೆಸರ ನವೀನ್ ಚಂದ್ರ ಭಂಡಾರಿ ಎಂಎಸ್‌ಸಿ ಮಣಿಪಾಲ್, ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಸದಾಶಿವ್ ಬಂಗೇರ ಕುರ್ಕಾಲು, ಕುಂದಾಪುರ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಮಧುಕರ್ ಭಂಡಾರಿ ಕೋಟೇಶ್ವರ, ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕ್ರೀಡಾ ಕಾರ್ಯದರ್ಶಿ ಮಂಜುನಾಥ್ ಭಂಡಾರಿ ಪಡುಕೆರೆ ಕೋಟ, ತಾಲೂಕು ಸವಿತಾ ಸಮಾಜದ ಗೌರವಾಧ್ಯಕ್ಷರಾದ ಸಂತೋಷ್ ಭಂಡಾರಿ ಉಪ್ಪುಂದ, ಉಪ್ಪುಂದ ವಲಯ ಸವಿತಾ ಸಮಾಜದ ಅಧ್ಯಕ್ಷರಾದ ಎಚ್. ಗೋಪಾಲ್ ಭಂಡಾರಿ ಕಂಚಿಕಾನ್ ಬಿಜೂರು, ನಾಗೂರು ವಲಯ ಸವಿತಾ ಸಮಾಜದ ಅಧ್ಯಕ್ಷರಾದ ಉಮೇಶ್ ಭಂಡಾರಿ ನಾಗೂರು, ಕೊಲ್ಲೂರು ವಲಯ ಸವಿತಾ ಸಮಾಜದ ಅಧ್ಯಕ್ಷರು ನವೀನ್ ಭಂಡಾರಿ ಹಾಲ್ಕಲ್, ಹಿರಿಯ ವೃತ್ತಿಬಾಂಧವರಾದ ಮಾಧವ ಭಂಡಾರಿ ಬೈಂದೂರು, ಉಪಾಧ್ಯಕ್ಷರಾದ ಲಕ್ಷ್ಮಣ ಭಂಡಾರಿ ಹೇರಂಜಾಲು, ರಾಜು ಸುವರ್ಣ ಬೈಂದೂರು, ತಾಲೂಕು ಸವಿತಾ ಸಮಾಜ ಪ್ರಧಾನ ಕಾರ್ಯದರ್ಶಿ ಸುರೇಶ್ ಸುವರ್ಣ ನಾವುಂದ ಮುಂತಾದವರು ಉಪಸ್ಥಿತರಿದ್ದರು.

ಆರಾಧ್ಯ ರಾಧಾಕೃಷ್ಣ ಮಲ್ಯ, ಲಾವಣ್ಯ ಕುಮಾರಮಲ್ಯ, ಆರ್ಯನ್ ರಾಧಾಕೃಷ್ಣ ಮಲ್ಯ ಪ್ರಾರ್ಥನೆ ಗೈದರು. ಗೋಪಾಲ ಮಲ್ಯ ಉಪ್ಪುಂದ ಪ್ರಸ್ತಾವನೆಗೈದರು. ಶ್ರಾವ್ಯ ಲಕ್ಷ್ಮಣ ಭಂಡಾರಿ ಹೆರಂಜಾಲು ಕಾರ್ಯಕ್ರಮ ನಿರೂಪಿಸಿ, ಗೌತಮಿ ಗೋಪಾಲ್ ಭಂಡಾರಿ ಸ್ವಾಗತಿಸಿ, ನಟೇಶ್ ಭಂಡಾರಿ ಉಪ್ಪುಂದ ವಂದಿಸಿದರು.

Exit mobile version