Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ನಮ್ಮ  ಕೈಯಲ್ಲಿ ಇದೆ. ಇಂತಹ ಉಚಿತ ತಪಾಸಣಾ ಶಿಬಿರಗಳಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯದ ದೃಷ್ಟಿಯಿಂದ ಸರಿಯಾದ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಭಂಡಾರ್ಕಾರ್ಸ್ ಕಾಲೇಜು ಟ್ರಸ್ಟ್ ಉಪಾಧ್ಯಕ್ಷ ಕೆ. ಶಾಂತಾರಾಮ ಪ್ರಭು ಹೇಳಿದರು.

ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ದುರ್ಗಾಂಬಾ  ಮೋಟಾರ್ಸ್ ಮತ್ತು ಕಸ್ತೂರಬಾ ಆಸ್ಪತ್ರೆ ಮಣಿಪಾಲ, ಕಾಲೇಜಿನ ಎನ್.ಸಿ.ಸಿ(ಆರ್ಮಿ ಮತ್ತು ನೇವಿ) ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ಯುಥ್ ರೆಡ್ ಕ್ರಾಸ್ ಘಟಗಗಳ ಸಹಯೋಗದಲ್ಲಿ ʼಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರʼ ವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಣಿಪಾಲ ಪ್ರೊಫೆಸರ್, ಪಬ್ಲಿಕ್ಹೆಲ್ತ್ ಡೆಂಟಿಸ್ಟ್ರಿ ಡಾ. ರಾಮ ಪ್ರಸಾದ್ ಅವರು ಮಾತನಾಡಿ, ಸದಾ ಉತ್ತಮ  ಆರೋಗ್ಯ ನಮ್ಮದಾಗಬೇಕಾದರೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ವಿಶ್ವ ತಂಬಾಕು ರಹಿತ ದಿನಾಚರಣೆಯ ಈ ಸಂದರ್ಭದಲ್ಲಿ ತಂಬಾಕು ಸೇವನೆಯ ಕೆಟ್ಟ ಪರಿಣಾಮಗಳ ಕಡೆಗೆ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಂಬಾಕುಮಿಶ್ರಿತ ವಸ್ತುಗಳ ಸೇವನೆಯಿಂದ ದೂರವಿರಬೇಕು ಎಂದರು.

ವಾಹನಗಳ ಚಾಲಕರು ಮತ್ತು ನಿರ್ವಾಹಕರು ದೂರದ ಪ್ರಯಾಣದ ಸಂದರ್ಭದಲ್ಲಿ  ಒತ್ತಡಗಳಿಗೆ ಒಳಗಾಗಿ ಈ ತರಹ ಕೆಲ ತಂಬಾಕುಮಿಶ್ರಿತ ವಸ್ತುಗಳ ಸೇವನೆಗೆ ಒಳಗಾಗುವ ಸಂದರ್ಭ ಮತ್ತು ಸಾಧ್ಯತೆ ಇರುತ್ತದೆ. ಇದರಿಂದ ತಂಬಾಕು ಸೇವನೆಯಿಂದ ದೂರ ಬರಲು ಕಷ್ಟವಾಗಬಹುದು. ಈ ತಂಬಾಕು ಸೇವನೆಯಿಂದ ದೂರವಾಗಲು ಕಸ್ತೂರಬಾ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಸೌಲಭ್ಯಗಳಿವೆ. ಅದನ್ನು ಉಪಯೋಗಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಅಲ್ಲದೆ ದಿನನಿತ್ಯ ಬೆಳಿಗ್ಗೆ ಮತ್ತು ರಾತ್ರಿ ಹುಲ್ಲು ಉಜ್ಜುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಆಗ ಹಲ್ಲಿನ ಆರೋಗ್ಯದ ಜೊತೆಗೆ ದೇಹದ ಆರೋಗ್ಯವು ಚೆನ್ನಾಗಿರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ  ದುರ್ಗಾಂಬಾ ಮೋಟಾರ್ಸ್ ಮಾಲಿಕರಾದ  ಸದಾನಂದ ಛಾತ್ರ ಉಪಸ್ಥಿತರಿದ್ದರು.

ಸುಮಾರು 150ಕ್ಕೂ ಜನರು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಶಿಬಿರದಲ್ಲಿ ರಕ್ತದೊತ್ತಡ, ರಕ್ತ ತಪಾಸಣೆ , ಬಾಯಿ ಮತ್ತು ಹಲ್ಲುಗಳ  ಸಂಪೂರ್ಣ ತಪಾಸಣೆ ಮತ್ತು ಸಲಹೆ, ಹುಳುಕು  ಹಲ್ಲುಗಳ ಸ್ವಚ್ಛಗೊಳಿಸುವವಿಕೆ ಬಾಯಿಯಲ್ಲಿ ಇರಬಹುದಾದ ಇತರೆ ಸಣ್ಣ ಪುಟ್ಟ ಗಡ್ಡೆಯ ನ್ಯೂನತೆಗಳಿಗೆ ಸರಳ ಚಿಕಿತ್ಸೆ ಒದಗಿಸುವುದು. ಅಗತ್ಯವೆನಿಸಿದರೆ ಲಭ್ಯವಿರುವ ಔಷಧಿ ನೀಡಲಾಯಿತು. ಕಣ್ಣಿನ ಚಿಕಿತ್ಸೆ, ಸ್ತ್ರೀರೋಗಗಳಿಗೆ ಸಲಹೆ, ಚರ್ಮದ ಆರೋಗ್ಯ ಮತ್ತು ಔಷಧಿ ಸಲಹೆ  ನೀಡಲಾಯಿತು. ತಂಬಾಕು ಮತ್ತು ಧೂಮಪಾನ ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಕುರಿತು ಮಾಹಿತಿ ನೀಡಲಾಯಿತು.

ಇಂಗ್ಲಿಷ್ ಪ್ರಾಧ್ಯಾಪಕ ಶಶಾಂಕ್ ಪಟೇಲ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Exit mobile version