Site icon Kundapra.com ಕುಂದಾಪ್ರ ಡಾಟ್ ಕಾಂ

ಬವಳಾಡಿ ಸ.ಹಿ.ಪ್ರಾ ಶಾಲೆಯ ನಿವೃತ್ತಿ ಹೊಂದಿದ ಶಿಕ್ಷಕಿ ಕಮಲ ಅವರಿಗೆ ಬೀಳ್ಕೊಡುಗೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಬವಳಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತಿ ಹೊಂದಿದ ಶಿಕ್ಷಕಿ ಕಮಲ ಅವರಿಗೆ ಇತ್ತೀಚಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಎಸ್‌ಡಿಎಂಸಿಯ ಅಧ್ಯಕ್ಷರಾದ ರಾಘವೇಂದ್ರ ಗಾಣಿಗ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗೋಕುಲ ಶೆಟ್ಟಿ ಜಿ., ಗೌರವಾಧ್ಯಕ್ಷರಾದ ರಘುರಾಮ ಶೆಟ್ಟಿ ಗೋಳಿಕಟ್ಟೆ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಎನ್.ಕೆ. ಬಿಲ್ಲವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕಿಯವರನ್ನು ಹಳೆ ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ ಹಾಗೂ ಅಧ್ಯಾಪಕರಿಂದ ಗೌರವಿಸಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಪಾಲಕ ಪೋಷಕರು ಮತ್ತು ಮುದ್ದು ಮಕ್ಕಳು ಹಾಜರಿದ್ದರು. ಎಲ್ಲರೂ ಶಿಕ್ಷಕಿಯ ಗುಣಗಾನ ಮಾಡಿದರು. ಶಿಕ್ಷಕರಾದ ರಾಘವೇಂದ್ರ ಕೆ. ಕಾರ್ಯಕ್ರಮ ನಿರೂಪಿಸಿ, ಸುನಿಲ್ ಕುಮಾರ್ ವಂದನಾರ್ಪಣೆಗೈದರು.

Exit mobile version