Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಯುವ ಬಂಟರ ಸಂಘದ ವತಿಯಿಂದ 2.50 ಲಕ್ಷ ರೂಪಾಯಿ ಆರ್ಥಿಕ ನೆರವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರೋಗ್ಯ ಭಾಗ್ಯ ಯೋಜನೆಯಡಿ ವಿವಿಧ ಫಲಾನುಭವಿಗಳಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮವು ಶುಕ್ರವಾರದಂದು ಸಂಘದ ಆಡಳಿತ ಕಛೇರಿ ಆರ್. ಎನ್. ಶೆಟ್ಟಿಯಲ್ಲಿ ನಡೆಯಿತು.

ಸಂಘದ ದಶಮ ಸಂಭ್ರಮದ ಪೋಷಕರು, ಕುಂದಾಪುರದ ಉದ್ಯಮಿಯಾದ ಸಟ್ವಾಡಿ ವಿಜಯ ಶೆಟ್ಟಿ ಅವರು ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿ ಮಾತನಾಡಿ, ಯುವ ಬಂಟರ ಸಂಘ ಆರೋಗ್ಯ ಭಾಗ್ಯ ಯೋಜನೆಯಡಿ ಜಾತೀಯತೆಯನ್ನು ಮೀರಿ ಎಲ್ಲಾ ಸಮುದಾಯದ ಅನಾರೋಗ್ಯ ಪೀಡಿತರಿಗೆ ಧನ ಸಹಾಯ ಮಾಡುತ್ತಿರುವುದು ಶ್ಲಾಘನೀಯ. ಇವರು ನಡೆಸಿಕೊಂಡ ಬರುತ್ತಿರುವ ಆರೋಗ್ಯ ಭಾಗ್ಯ ಯೋಜನೆಗೆ  ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ ಪೋಷಕರು, ಸಮತಾ ಮೋಟರ್ಸ್ ನ ಮಾಲಕರಾದ ಜೆಡ್ಡಾಡಿ ವಿಜಯಕುಮಾರ್ ಶೆಟ್ಟಿ ಗಿಳಿಯಾರು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸಂಘ ಮಾಡಿಕೊಂಡು ಬರುತ್ತಿರುವ ಕಾರ್ಯಕ್ರಮಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಪ್ರತಿಯೊಂದು ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾದದ್ದು. ಹಾಗಾಗಿ ಸಂಘದ ವತಿಯಿಂದ ಶಿಫಾರಸು ಮಾಡಿದ ಅತೀ ಬಡತನದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕುಂದಾಪುರದಿಂದ ಮಂಗಳೂರು ತನಕದ ನಮ್ಮ ಖಾಸಗಿ ಬಸ್ಸಿನಲ್ಲಿ ಉಚಿತ ಬಸ್ ಪಾಸ್  ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು ವಹಿಸಿದ್ದರು.

ಸಭೆಯಲ್ಲಿ ಫಲಾನುಭವಿಗಳಾದ ಪ್ರೇಮ ಶೆಟ್ಟಿ ಮೊಳಹಳ್ಳಿ, ಜ್ಯೋತಿ ಶೆಟ್ಟಿ ಹೊಸಂಗಡಿ, ಉಷಾ ಮೊಗವೀರ ನೆಲ್ಲಿಕಟ್ಟೆ, ಪ್ರಜ್ವಲ್ ಕೊಠಾರಿ ಬೇಳೂರು, ರಶ್ಮಿತಾ ಶೆಟ್ಟಿ ಇಡೂರು, ಜಯಂತಿ ಶೆಟ್ಟಿ ರಟ್ಟಾಡಿ, ನಯನ ಸೇರ್ವೆಗಾರ ಕೋಣಿ, ನಿರ್ಮಲಾ ಶೆಟ್ಟಿ ರಾಗಿಹಕ್ಲು, ಅನುಷಾ ಶೆಟ್ಟಿ ಹಾಲಾಡಿ, ಜ್ಯೋತಿ ಶೆಟ್ಟಿ ಬವಲಾಡಿ ವಿದ್ಯಾರ್ಥಿನಿಯರಾದ ರಂಜಿತಾ ಶೇಟ್ ನೆಲ್ಲಿಕಟ್ಟೆ, ರಕ್ಷಿತಾ ಶೇಟ್ ನೆಲ್ಲಿಕಟ್ಟೆ,   ಶ್ರೀದೇವಿ ಶೆಟ್ಟಿ ಚೇರ್ಕಾಡಿ, ಶಬಲೀ ಶೆಟ್ಟಿ ಕಳತ್ತೂರು , ಲಾವಣ್ಯ ಪೂಜಾರಿ ನಂಚಾರು ಅವರಿಗೆ ಚೆಕ್ ವಿತರಣೆ ಮಾಡಲಾಯಿತು.

ರಕ್ಷಿತಾ ಶೆಟ್ಟಿ ಜಪ್ತಿ, ಪ್ರೇಮಾ ಶೆಟ್ಟಿ ಜಡ್ಡಿನಕೂಡ್ಲು ನೇರಳಕಟ್ಟೆ ಅವರಿಗೆ ಹೊಲಿಗೆ ಯಂತ್ರ ನೀಡಲಾಯಿತು.

ಸಂಘದ ಗೌರವಾಧ್ಯಕ್ಷರಾದ ವತ್ಸಲಾ ದಯಾನಂದ ಶೆಟ್ಟಿ, ಸ್ಥಾಪಕಾಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುರಳಿಧರ ಶೆಟ್ಟಿ ಹುಯ್ಯಾರು, ಮಾಜೀ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು, ಸಂಘದ  ಮಾಜಿ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಪ್ರಶಾಂತ್ ಶೆಟ್ಟಿ ಶಿರೂರು ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷರಾದ ಡಾ. ಚೇತನ್ ಶೆಟ್ಟಿ ಕೋವಾಡಿ ನಿರೂಪಿಸಿ, ವಂದಿಸಿದರು.

Exit mobile version