ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆನ್ನಾಬೈಲ್ ಜುಮಾ ಮಸೀದಿಯಲ್ಲಿ ಪ್ರವಾದಿ ಇಬ್ರಾಹಿಮರ ತ್ಯಾಗ ಬಲಿದಾನಗಳನ್ನು ಸಂಕೇತಿಸುವ ಮತ್ತು ಸ್ಮರಿಸುವ ಬಕ್ರೀದ್ ಪ್ರಾರ್ಥನೆ ಜರುಗಿತು.
ಧರ್ಮಗುರು ಅಬ್ದುಲ್ ಹಫೀಜ್ ಪ್ರವಾದಿ ಇಬ್ರಾಹಿಂ ಅವರು ಮಾತನಾಡಿ, “ದೇವನಿಷ್ಠೆ ಮತ್ತು ಶ್ರದ್ದೆಯ ದೊಡ್ಡ ಸಂಕೇತವಾಗಿ ಲೋಕಕ್ಕೆ ಮೂಡಿಬಂದರು. ಅವರ ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸುವುದರಿಂದ ಮನುಷ್ಯನ ಮನಸ್ಸು ಸಂವೇದನಾಶೀಲವಾಗಿ ಸಾಮಾಜಿಕ ಸಂಬಂಧಗಳು ಸುಗಮವಾಗಲು ಕಾರಣವಾಗುತ್ತದೆ. ಇಬ್ರಾಹಿಮರು ತಮ್ಮ ಬದುಕಿನ ಕಾಲಾವಧಿಯಲ್ಲಿ ಬಡವ ಶ್ರೀಮಂತ ಕರಿಯ ಬಿಳಿಯ ಮುಂತಾದ ಸಾಮಾಜಿಕ ತಾರತಮ್ಯಗಳನ್ನು ತೊಡೆದು ಹಾಕಲು ತಮ್ಮ ಜೀವಮಾನವಿಡೀ ಶ್ರಮಿಸಿದರು. ಮನುಕುಲಕ್ಕೆ ಇಬ್ರಾಹಿಮರು ನೀಡಿದ ಕೊಡುಗೆಯನ್ನು ಸೀಮಿತ ಅವಧಿಯಲ್ಲಿ ಹೇಳಿ ಮುಗಿಸಲಾಗದು” ಎಂದರು.
ಸಭೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಸೈಯದ್ ರಫೀಕ್, ಉಪಾಧ್ಯಕ್ಷ ಸೈಯದ್ ಆಸೀಫ್, ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್, ಮಾಜಿ ಅಧ್ಯಕ್ಷ ಸಯ್ಯದ್ ಅಬ್ಬಾಸ್, ಹಸನ್ ಸಾಹೇಬ್, ಅಲಿಯಬ್ಬ, ನಜಿರ್ ಸಾಹೇಬ್, ಹಯಾತ್ ಭಾಷಾ ಸಾಹೇಬ್, ಯೂಸುಫ್ ಖಾದರ್, ಶಬ್ಬೀರ್ ಸಾಹೇಬ್, ಅಮಾನ್ ಜಮಾಲ್, ಆದಮ್ ಸಾಹೇಬ್, ಅಷ್ಪಾಕ್ ಸಾಬ್ಜನ್, ಖಲೀಲ್ ತವಕ್ಕಲ್, ಮುಹಮ್ಮದ್ ರಫೀಕ್, ಖ್ವಾಜಾ ಸಾಹೇಬ್ ಮುಂತಾದವರು ಉಪಸ್ಥಿತರಿದ್ದರು.

