Site icon Kundapra.com ಕುಂದಾಪ್ರ ಡಾಟ್ ಕಾಂ

ಬೀಜಾಡಿ ಸೀತಾಲಕ್ಷ್ಮಿ ಮತ್ತು ಬಿಎಂ ರಾಮಕೃಷ್ಣ ಹತ್ವಾರ್ ಸರಕಾರಿ ಪ್ರೌಢಶಾಲೆ: ಉಚಿತ ನೋಟ್ಸ್‌ ಬುಕ್‌ ವಿತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಪೋಷಕರು ಶಿಕ್ಷಕರು ಎಷ್ಟೇ ಸಹಕರಿಸಿದರೂ ವಿದ್ಯಾರ್ಥಿಗಳು ತಮ್ಮ ಮನೋಭಾವ ಬದಲಾಯಿಸಿಕೊಳ್ಳುವುದು ಅಷ್ಟೇ ಮುಖ್ಯ. ಆ ಮೂಲಕ ವಿದ್ಯಾರ್ಥಿಗಳು ತಮಗೆ ಶಾಲೆಗಳು, ಶಿಕ್ಷಕರು ಮತ್ತು ದಾನಿಗಳು ನೀಡಿದ  ಕೊಡುಗೆಗಳಿಗೆ  ಕೃತಜ್ಞತೆ ಸಲ್ಲಿಸಬಹುದು ಎಂದು ಗೀತಾ ಎಚ್ಎಸ್ಎನ್ ಫೌಂಡೇಶನ್‌ನ ಅಧ್ಯಕ್ಷರಾದ ಶಂಕರ ಐತಾಳ್ ಅಭಿಪ್ರಾಯ ಪಟ್ಟರು.

ಅವರು ಬೀಜಾಡಿ ಸೀತಾಲಕ್ಷ್ಮಿ ಮತ್ತು ಬಿಎಂ ರಾಮಕೃಷ್ಣ ಹತ್ವಾರ್ ಸರಕಾರಿ ಪ್ರೌಢಶಾಲೆಯಲ್ಲಿ ಗೀತಾನಂದ ಫೌಂಡೇಶನ್ ಮಣೂರು  ಕೋಟ ಇವರು ಕೊಡ ಮಾಡುವ ಉಚಿತ ನೋಟ್ ಪುಸ್ತಕಗಳ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್‌ ಬುಕ್‌ ವಿತರಿಸಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷರಾದ ಲಕ್ಷ್ಮಣ್ ಟಿ ನಾಯ್ಕ್  ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಂಕರ ಐತಾಳ್ ಮತ್ತು  ಅವರ ಪತ್ನಿ ಪ್ರಭಾವತಿ ಐತಾಳ್, ಕಟ್ಟಡ ರಚನಾ ಸಮಿತಿಯ ಅಧ್ಯಕ್ಷರಾದ  ಶೇಖರ ಚಾತ್ರಬೆಟ್ಟು, ಕೋಶಾಧಿಕಾರಿ ಬಾಬಣ್ಣ ಪೂಜಾರಿ, ಎಸ್ ಡಿಎಂಸಿ ಸದಸ್ಯರಾದ ಶ್ರೀನಿವಾಸ ಕೊರವಡಿ, ಹೇಮಾ, ಶೋಭಾ, ಕುಸುಮ, ಪೂರ್ಣಿಮಾ, ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕರಾದ ಡಾ. ಸದಾನಂದ ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ವಿನೋದ ಎಂ. ಅವರು ಪ್ರಾಸ್ತಾವಿಕ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿ, ಉದಯ ಮೊಗವೀರ ವಂದಿಸಿದರು.

Exit mobile version