Site icon Kundapra.com ಕುಂದಾಪ್ರ ಡಾಟ್ ಕಾಂ

ಅಖಿಲ ಭಾರತ ಮಟ್ಟದ ಟಾಪ್ 10,000 ರ‍್ಯಾಂಕ್‌ನಲ್ಲಿ ಆಳ್ವಾಸ್‌ನ 75 ವಿದ್ಯಾರ್ಥಿಗಳು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ಅಖಿಲ ಭಾರತ ಮಟ್ಟದ ಯುಜಿ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಒಂದೇ ಕ್ಯಾಂಪಸ್‌ನ ಕ್ಲಾಸ್‌ರೂಮ್ ವ್ಯವಸ್ಥೆಯಲ್ಲಿ ಅಖಿಲ ಭಾರತ ಮಟ್ಟದ ಟಾಪ್ ಎಐಆರ್‌ 10,000 ರ‍್ಯಾಂಕ್‌ಗಳಲ್ಲಿ 75 ವಿದ್ಯಾರ್ಥಿಗಳು ಸ್ಥಾನ ಪಡದು ಶ್ರೇಷ್ಠ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಳ್ವಾಸ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು 600ಕ್ಕೂ ಅಧಿಕ ಒರ್ವ ವಿದ್ಯಾರ್ಥಿ, 550ಕ್ಕೂ ಅಧಿಕ 21 ವಿದ್ಯಾರ್ಥಿಗಳು, 500ಕ್ಕೂ ಅಧಿಕ 116 ವಿದ್ಯಾರ್ಥಿಗಳು, 450ಕ್ಕೂ ಅಧಿಕ 401 ವಿದ್ಯಾರ್ಥಿಗಳು, 400ಕ್ಕೂ ಅಧಿಕ 596 ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ.

ರಾಷ್ಟçಮಟ್ಟದಲ್ಲಿ ಅಖಿಲ ಭಾರತ ಮಟ್ಟದ ಟಾಪ್ 1,000 ರ‍್ಯಾಂಕ್‌ನ ಒಳಗೆ 9 ವಿದ್ಯಾರ್ಥಿಗಳು ಹಾಗೂ ಟಾಪ್ 2,000 ಒಳಗೆ 20 ವಿದ್ಯಾರ್ಥಿಗಳು ಹಾಗೂ ಟಾಪ್ 5,000 ರ‍್ಯಾಂಕ್‌ಗಳಲ್ಲಿ 48 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

ಪ್ರೇಕ್ಷಾ ಎಂ.ಎಸ್ 82ನೇ ರ‍್ಯಾಂಕ್‌, ಲಿಖಾ ತಡಪ್ 235ನೇ ರ‍್ಯಾಂಕ್‌, ರಾಘವೇಂದ್ರ ಶಂಕರ್ 401ನೇ ರ‍್ಯಾಂಕ್‌, ಖಂಡೂಲಾ ಭಾನುಪ್ರಸಾದ 610ನೇ ರ‍್ಯಾಂಕ್‌, ತನಿಯಾ ಜರ್ಮಿನ್-749ನೇ ರ‍್ಯಾಂಕ್‌, ವಿಕ್ರಮ್- 842ನೇ ರ‍್ಯಾಂಕ್‌, ಶಿವಪ್ರಸಾದ್-907ನ ರ‍್ಯಾಂಕ್‌, ಅಕ್ಷಯ್ ಎಂ ಹೆಗ್ಡೆ 912ನೇ ರ‍್ಯಾಂಕ್‌ ಪಡೆದು ಅಗ್ರ ಪಂಕ್ತಿಯ ಸಾಧನೆ ಮೆರೆದಿದ್ದಾರೆ.

ರಾಘವೇಂದ್ರ ಶಂಕರ್-601, ಅಕ್ಷಯ್ ಎಂ ಹೆಗ್ಡೆ- 597, ಶಿವಪ್ರಸಾದ- 587, ಪಾಂಡುರAಗ ಜಿಬಿ-584, ತುಷಾರ್ ಘನಶ್ಯಾಮ್-581, ಪ್ರೇಕ್ಷಾ ಎಮ್‌ಎಸ್-580, ವೈಭವ್-580, ಅರುಣ್‌ಗೌಡ ಪಾಟೀಲ್-579, ಅರುಣ್ ಜಂಬಗಿ-568, ಶಶಂಕ್ ಉಡುಪ-567, ತುಷಾರ್ ಎಸ್ ಅವತಿ-567, ಮೋಹನ್ ಡಿ-567, ತುಷಾರ್ ಉಡುಪ-565, ಜಸ್ವಂತ್ ಸಿ-564, ಶ್ರೀನಿವಾಸ ರೆಡ್ಡಿ-561, ವಿಕಾಸ್ ಗೌಡ-559, ಸೃಜನ್ ವಿಎ-558, ಗಣೇಶ್-557, ಪ್ರಜ್ವಲ್ ಎಸ್.ಕೆ.-556, ವರುಣ್ ಶೆಟ್ಟಿ-554, ಪವನ್ ಮಂಜುನಾಥ್-552 ಅಂಕವನ್ನು ಪಡೆದಿದ್ದಾರೆ.

450ಕ್ಕೂ ಅಧಿಕ ವಿದ್ಯಾರ್ಥಿಗಳು ಎಂಬಿಬಿಎಸ್ ಸೀಟ್ ಪಡೆಯಲು ಅರ್ಹ ಜನರಲ್ ಕೆಟಗರಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹೈದ್ರಾಬಾದ್ ಕರ್ನಾಟಕ, ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ, ವಿಶಿಷ್ಟ ಚೇತನರು ಹಾಗೂ ಆರ್ಥಿಕ ಹಿಂದುಳಿದ ವರ್ಗದ ಕೋಟಾದಲ್ಲಿ ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರಿ ಕೋಟಾದಲ್ಲಿ ಎಂಬಿಬಿಎಸ್ ಸೀಟ್ ಪಡೆಯಲು ಅರ್ಹತೆ ಪಡೆದಿದ್ದಾರೆ.

ದತ್ತು ಸ್ವೀಕಾರದ ಫಲಾನುಭವಿಗಳ ಸಾಧನೆ

ಉತ್ತಮ ಸಾಧನೆ ಮೆರೆದ ಹೆಚ್ಚಿನ ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಸ್ವೀಕಾರ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸಂಸ್ಥೆ ಅವರ ವಿದ್ಯಾಭ್ಯಾಸಕ್ಕೆ ಸುಮಾರು 4 ಕೋಟಿಯಷ್ಟು ವರ್ಷಕ್ಕೆ ವ್ಯಯಿಸುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಚರ್ಯ ಎಂ. ಸದಾಕತ್, ಆಡಳಿತಾಧಿಕಾರಿ ಪ್ರದೀಪ ಕುಮಾರ್ ಎಂ. ಉಪಸ್ಥಿತರಿದ್ದರು.

Exit mobile version