Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಭಜನ್ ಸಂಧ್ಯಾ 

??????

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಪ್ರತಿಭೆ ನಿಮ್ಮದು ವೇದಿಕೆ ನಮ್ಮದು 2025ರ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸತತ 108ನೇ ತಿಂಗಳ ಕಾರ್ಯಕ್ರಮ ವಿಷ್ಣು ಸಹಸ್ರನಾಮದೊಂದಿಗೆ ಆರಂಭವಾಯಿತು.

ನಿವೃತ್ತ ಶಿಕ್ಷಕ ಸದಾಶಿವ ಐತಾಳ್, ಉಪ್ಪಿನಕುದ್ರು ಅಧ್ಯಕ್ಷತೆಯನ್ನು ವಹಿಸಿದ್ದರು.

ವಸಂತಿ ಆರ್. ಪಂಡಿತ್ ಅವರನ್ನು ಗೊಂಬೆಯಾಟ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ವರದರಾಯ ಕಾಮತ್ ಮತ್ತು ವೀಣಾ ಕಾಮತ್ ಅವರನ್ನು ಗೌರವಿಸಲಾಯಿತು. ವಸಂತಿ ಆರ್. ಪಂಡಿತ್, ಕುಂದಾಪುರ ಅವರು ನಡೆಸಿಕೊಟ್ಟ ಭಜನ್ ಸಂಧ್ಯಾ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂತು.

ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ ಪೈ, ಉಪನ್ಯಾಸಕಿ ಮಾಲತಿ ಜಿ. ಪೂಜಾರಿ, ಶ್ರೀರಕ್ಷಾ ಎಸ್. ಪೈ, ವಸಂತಿ ಆರ್. ಪಂಡಿತ್ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಉಪಸ್ಥಿತರಿದ್ದರು.

ಶಾಮ್ ಜಿ.ಎನ್.ಪೂಜಾರಿ, ಗಂಗೊಳ್ಳಿ ಇವರ ಕೊಳಲು ವಾದನ ಹಾಗೂ ಆಕಾಂಕ್ಷಾ ಎಸ್. ಪೈ ಅವರ ಭಾವಗೀತೆ ಪ್ರೇಕ್ಷಕರ ಗಮನ ಸೆಳೆಯಿತು.

ಆಕಾಂಕ್ಷಾ ಎಸ್. ಪೈ ಪ್ರಾರ್ಥಿಸಿದರು. ಭಾಸ್ಕರ್ ಕೊಗ್ಗ ಕಾಮತ್ ನಿರೂಪಿಸಿದರು.

Exit mobile version