Site icon Kundapra.com ಕುಂದಾಪ್ರ ಡಾಟ್ ಕಾಂ

ಪಿಎಸೈ ವರ್ಗಾವಣೆ: ಗಂಗೊಳ್ಳಿ ಠಾಣೆಗೆ ಪವನ್‌ ನಾಯಕ್‌, ಸೆನ್‌ ಠಾಣೆಗೆ ಹರೀಶ್‌ ಆರ್‌.

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಪಶ್ಚಿಮ ವಲಯದ 12 ಪಿಎಸೈಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಅಮಿತ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದಾರೆ.

ಉಡುಪಿ ಸೆನ್‌ ಠಾಣೆಯಲ್ಲಿ ಪಿಎಸೈ ಆಗಿ ಕರ್ತವ್ಯದಲ್ಲಿದ್ದ ಪವನ್‌ ನಾಯಕ್‌ ಅವರನ್ನು ಗಂಗೊಳ್ಳಿ ಪೊಲೀಸ್‌ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪಿಎಸೈ ಆಗಿಯೂ, ಗಂಗೊಳ್ಳಿ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಿಎಸೈ ಆಗಿದ್ದ ಹರೀಶ್‌ ಆರ್‌. ಅವರನ್ನು ಉಡುಪಿ ಸೆನ್‌ ಠಾಣೆಯ ಪಿಎಸೈ ಆಗಿಯೂ ಪರಸ್ಪರ ವರ್ಗಾವಣೆಗೊಳಿಸಲಾಗಿದೆ.

ಇನ್ನು ಉಡುಪಿ ಜಿಲ್ಲೆಯಲ್ಲಿ ಮಲ್ಪೆ ಠಾಣೆಗೆ ಅನಿಲ್‌ ಕುಮಾರ್‌ ಡಿ., ಅಜೆಕಾರು ಠಾಣೆಗೆ ಮಹೇಶ್‌ ಟಿ.ಎಂ ಅವನ್ನು ಹೆಬ್ರಿ ಠಾಣೆಗೆ ರವಿ ಬಸಪ್ಪ ಕಾರಗಿ ಅವರನ್ನು ಕಾರ್ಕಳ ಠಾಣೆಗೆ ಮುರಳಿಧರ ನಾಯ್ಕ್‌ ಅವರನ್ನು ವರ್ಗಾವಣೆಗೊಳಿಸಲಾಗಿದೆ.

Exit mobile version