Kundapra.com ಕುಂದಾಪ್ರ ಡಾಟ್ ಕಾಂ

ಪ್ರಶಿಕ್ಷಣ ವರ್ಗದಿಂದ ಧ್ಯೇಯ, ನಿಷ್ಠೆಗಳ ಅರಿವು: ನಿರ್ಮಲ್‌ ಕುಮಾರ್‌

ಕುಂದಾಪುರ: ದೇಶದ ವ್ಯವಸ್ಥೆಯಲ್ಲಿ ಬದಲಾವಣೆ ಆಗ ಬೇಕಿ ದ್ದರೆ ಅದು ರಾಜಕೀಯದಿಂದ ಮಾತ್ರ ಸಾಧ್ಯ. ಭಾರತೀಯ ಜನತಾ ಪಕ್ಷಕ್ಕೆ ತನ್ನದೇ ಆದ ತಣ್ತೀ ಸಿದ್ಧಾಂತಗಳಿವೆ. ಪಕ್ಷ ಸಿದ್ಧಾಂತ, ವ್ಯವಸ್ಥೆಯಲ್ಲಿನ ಬದ ಲಾವಣೆ, ಧ್ಯೇಯ, ನಿಷ್ಠೆಗಳ ಅರಿವು ಮೂಡಿಸುವ ಈ ಪ್ರಶಿಕ್ಷಣ ವರ್ಗ ಬಿಜೆಪಿಯ ವೈಶಿಷ್ಟ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರ್ಮಲ್‌ ಕುಮಾರ್‌ ಸುರಾನ ಹೇಳಿದರು.

ಅವರು ಕೋಟೇಶ್ವರದ ಯುವ ಮೆರಿಡಿಯನ್‌ ಮಿನಿ ಹಾಲ್‌ನಲ್ಲಿ ಉಡುಪಿ ಜಿಲ್ಲಾ ಬಿಜೆಪಿ, ಪಂ. ದೀನ ದಯಾಳ್‌ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಧ್ಯಾಯದ ಜಿಲ್ಲಾ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು. ಸೂಕ್ತ ತರಬೇತಿಗಳು ರಾಜಕಾರಣಿಗಳಲ್ಲಿ ಇಲ್ಲದೇ ಇರುವುದರಿಂದ ರಾಜಕೀಯ ಅರ್ಥ ಕಳೆದುಕೊಳ್ಳುತ್ತಿದೆ. ರಾಜಕಾರಣವೆಂದರೆ ಕೇವಲ ಹಣ, ಜನ ಸಂಪರ್ಕ ಎನ್ನುವ ಭ್ರಮೆ ಹುಟ್ಟಿಸುವ ಈ ಕಾಲದಲ್ಲಿ ರಾಜನೀತಿಗೆ ಸರಿಯಾದ ಅರ್ಥ ಕೊಡುವಲ್ಲಿ ಬಿಜೆಪಿಗೆ ಮಾತ್ರ ಸಾಧ್ಯ ಎನ್ನುವುದನ್ನು ಜನರು ತಿಳಿಸಿಕೊಟ್ಟಿದ್ದಾರೆ ಎಂದರು.

ಕೇಂದ್ರದಲ್ಲಿ ಬಿಜೆಪಿ ಚುಕ್ಕಾಣಿ ಹಿಡಿದ ಅನಂತರ ದೇಶದ ಚಿತ್ರಣವೇ ಬದಲಾಗಿದೆ. ಭಿಕ್ಷುಕರ ದೇಶ ಎನ್ನುವಂತೆ ನೋಡುತ್ತಿದ್ದ ರಾಷ್ಟ್ರಗಳಿಗೆ ರಾಷ್ಟ್ರದ ಉತ್ತಮ ದೇಶ ಎಂದು ಬಿಂಬಿಸುವಂತೆ ಮಾಡಿದ್ದು ಬಿಜೆಪಿ. ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ಯಾಮಲಾ ಕುಂದರ್‌, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಉದಯ ಕುಮಾರ್‌ ಶೆಟ್ಟಿ, ಪ್ರಶಿಕ್ಷಣ ಪ್ರಕೋಷ್ಠದ ವಿಭಾಗ ಸಹ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಉಪಸ್ಥಿತರಿದ್ದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೇಷ್ಮಾ ಉದಯಕುಮಾರ್‌ ಶೆಟ್ಟಿ ಅವರು ವಂದಿಸಿದರು. ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಸಾಣೂರು ನರಸಿಂಹ ಕಾಮತ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

ಜಿಲ್ಲಾ ಬಿಜೆಪಿಯ 210 ಮಂದಿ ಕಾರ್ಯಕರ್ತರು ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿದ್ದರು.

Exit mobile version