Site icon Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ಶಾಲೆಯ ಪುಷ್ಪ ವಾಟಿಕಾದಲ್ಲಿ ರಕ್ಷಕ-ಶಿಕ್ಷಕ ಸಭೆ  ಮತ್ತು ಫಾದರ್ಸ್ ಡೇ ಆಚರಣೆ 

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಗುರುಕುಲ ಶಾಲೆಯ ಪುಷ್ಪ ವಾಟಿಕಾದಲ್ಲಿ ರಕ್ಷಕ-ಶಿಕ್ಷಕ ಸಭೆ  & ಫಾದರ್ಸ್ ಡೇ ಆಚರಣೆಯನ್ನು ನಡೆಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸಂಪೂರ್ಣ ಬೆಳವಣಿಗೆಗೆ ಬೇಕಾದ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುತ್ತಿದೆ, ಜೊತೆಗೆ ಪೋಷಕರಿಗಾಗಿ ಕೂಡ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆ ಎಲ್ಲಾ ಚಟುವಟಿಕೆಗಳಲ್ಲಿ ನೀವು ಭಾಗವಹಿಸಿ,ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರದ ಜೊತೆಗೆ ತಂದೆಯ ಪಾತ್ರ ತುಂಬಾ ಮುಖ್ಯ ಎಂದರು. 

ಪೋಷಕರು ಸಾಧ್ಯವಾದಷ್ಟು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸುವುದರ ಜೊತೆಗೆ ಜವಾಬ್ದಾರಿಯುತ ಪೋಷಕರಾಗಿ ಪ್ರತಿ ಹಂತದಲ್ಲಿ ಅವರನ್ನು ತಿದ್ದುವ ಕೆಲಸವನ್ನು ಮಾಡಿದಾಗ ಮಾತ್ರ ಆ ಮಗುವು ಮುಂದೆ ಸಮಾಜದಲ್ಲಿ ಉತ್ತಮ ಸತ್ಪ್ರಜೆಯಾಗಿ ಸಮಾಜವನ್ನು ಮುನ್ನಡೆಸಲು ಸಾಧ್ಯ ಎಂದರು.

ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ಅವರು ಶೈಕ್ಷಣಿಕ ಸಾಲಿನ ಕಾರ್ಯ ಚಟುವಟಿಕೆಗಳು ಮತ್ತು ಮುಂದಿನ ವಾರ್ಷಿಕ  ಯೋಜನೆಗಳು ಜೊತೆಗೆ ಈ ವರ್ಷದಿಂದ  ವಿದ್ಯಾರ್ಥಿಗಳಿಗೆ ಹೊಸದಾಗಿ ಸ್ಕೌಟ್ಸ್ ಮತ್ತು ಗೈಡ್ಸ್ನ ಬನ್ನಿಸ್ ಎನ್ನುವ ವಿಶೇಷ ಚಟುವಟಿಕೆಯನ್ನು ಮಾಡುತ್ತಿದ್ದೇವೆ ಅಲ್ಲದೆ ವಿವಿಧ ಆಚರಣೆ ಮತ್ತು ಸ್ಪರ್ಧೆಗಳ  ಕುರಿತು ಪೋಷಕರಿಗೆ ವಿವರವಾಗಿ ತಿಳಿಸಿದರು.

ಫಾದರ್ಸ್ ಡೇ ಯ ವಿಶೇಷವಾಗಿ ಅಪ್ಪಂದಿರಿಗೆ ಹಸ್ತ ಮುದ್ರೆಯ ಆಟ, ಟೀ ಶರ್ಟ್ ಫೋಲ್ಡಿಂಗ್ ಗೇಮ್ ಮತ್ತು ಮೋಜಿನ ಸಂಗೀತ ಆಡಿಸುವ ಮೂಲಕ ದಿನವನ್ನು ಅರ್ಥಪೂರ್ಣಗೊಳಿಸಲಾಯಿತು. ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳ ತಂದೆಯವರಿಗೂ ಭಾಗವಹಿಸುವಿಕೆಯ ಪ್ರಮಾಣಪತ್ರ ನೀಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. 

ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ವಿಶಾಲ ಶೆಟ್ಟಿ ನಿರೂಪಿಸಿ,  ವಂದಿಸಿದರು.

Exit mobile version