Kundapra.com ಕುಂದಾಪ್ರ ಡಾಟ್ ಕಾಂ

ಲಯನ್ಸ್ ಕ್ಲಬ್ ಹಂಗಳೂರಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ಕುಂದಾಪುರ: ಲಯನ್ಸ್ ಕ್ಲಬ್ ಹಂಗಳೂರಿಗೆ ಲಯನ್ಸ್ ಜಿಲ್ಲಾ 317 ಇದರ ಗವರ್ನರ್ ಡಿ. ಶ್ರೀಧರ ಶೇಣವ ಅವರ ಅಧಿಕೃತ ಭೇಟಿಯ ಹಿನ್ನಲೆಯಲ್ಲಿ ಕುಂದಾಪುರದ ಆಶೀರ್ವಾದ ಹಾಲ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಲಯನ್ಸ್ ಕ್ಲಬ್ ಹಂಗಳೂರಿನ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಅವರ ಕಾರ್ಯ ಚಟುವಟಿಕೆ, ಸೇವೆಯನ್ನು ಪ್ರಶಂಸಿದ ಜಿಲ್ಲಾ ಗವರ್ನರ್ ಡಿ.ಶ್ರೀಧರ ಶೇಣವ ಅವರು ಸಮಾಜಕ್ಕೆ ಮಾದರಿಯಾಗಿ ಲಯನ್ಸ್ ಕ್ಲಬ್ ಹಂಗಳೂರು ಕಾರ್ಯ ನಿರ್ವಹಿಸಿದೆ ಎಂದು ಅಭಿನಂದಿಸಿದರು. ಲಯನ್ಸ್ ಕ್ಲಬ್ ಹಂಗಳೂರಿನ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ, ಜಿಲ್ಲಾ ಸಂಯೋಜಕ ತಲ್ಲೂರು ಶಿವರಾಮ ಶೆಟ್ಟಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಚ್. ಬಾಲಕೃಷ್ಣ ಶೆಟ್ಟಿ, ಖಜಾಂಚಿ ಸ್ಟ್ಯಾನಿ ಡಿ ಮೆಲ್ಲೋ ಉಪಸ್ಥಿತರಿದ್ದರು.

ಕೊಲ್ಲೂರು ಭೇಟಿ : ಲಯನ್ಸ್ ಕ್ಲಬ್ ಹಂಗಳೂರಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಜಿಲ್ಲಾ ಗವರ್ನರ್ ಡಿ ಶ್ರೀಧರ ಶೇಣವ ಅವರು ಕೊಲ್ಲೂರಿಗೆ ತೆರಳಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದೇವಳದ ವತಿಯಿಂದ ಶ್ರೀಧರ್ ಶೇಣವ ದಂಪತಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು. ಬಳಿಕ ಗೋಳಿಹೊಳೆ ಗ್ರಾಮಕ್ಕೆ ತೆರಳಿ ಅಲ್ಲಿನ ನಿವಾಸಿ ಮರಾಠಿ ಜನಾಂಗದ ಮುಕಾಂಬು ಎಂಬವರಿಗೆ ಮನೆ ನಿರ್ಮಿಸಲು 25ಸಾವಿರ ರೂ.ಗಳ ಸಹಾಯಧನವನ್ನು ಲಯನ್ಸ್ ಕ್ಲಬ್ ಹಂಗಳೂರು ವತಿಯಿಂದ ನೀಡಲಾಯಿತು. ಅರೆಶಿರೂರು ಗ್ರಾಮ ಜೋಗಿ ಜೆಡ್ಡು ಎಂಬಲ್ಲಿ ಸುಮಾರು 14 ವರ್ಷ ಬಾಲಕ ಆಶಿಷ್ ಕಳೆದ 3 ತಿಂಗಳ ಹಿಂದೆ ಮೋಟಾರ್ ಬೈಕ್ ಅಪಘಾತದಿಂದ ಬಿದ್ದು ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಾಂತ್ವನ ಹೇಳಿ ಚಿಕಿತ್ಸೆಗೆ ರೂ 12,500ನ್ನು ಒದಗಿಸಲಾಯಿತು.

ಹೆಮ್ಮಾಡಿ ಸಮೀಪದ ಹರಗೋಡು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರಕ್ಕೆ ಗೋಡೆ ಗಡಿಯಾರ, ಕುಡಿಯುವ ನೀರಿನ ಡ್ರಮ್, ಫೈಬರ್ ಕುರ್ಚಿಗಳು, ಕರಿಹಲಗೆ, ನೀರಿನ ಪಾತ್ರೆ ಇತ್ಯಾದಿಗಳನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು.
ಕಟ್‌ಬೇಲ್ತೂರಿನ ಸುಳ್ಸೆಯ ನಾಗ ನಾಯ್ಕ್ ಮತ್ತು ನಾಗಮ್ಮ ದಂಪತಿಗಳು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗೆ ೫ ಸಾವಿರ ರೂ. ದೇಣಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಲಯನ್ ಜಿಲ್ಲಾ ಗವರ್ನರ್ ಡಿ.ಶ್ರೀಧರ್ ಶೇಣವ, ಜ್ಯೋತಿ ಶೇಣವ, ಲಯನ್ಸ್ ಕ್ಲಬ್ ಹಂಗಳೂರಿನ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಕಾರ್ಯದರ್ಶಿ ಎಚ್. ಬಾಲಕೃಷ್ಣ ಶೆಟ್ಟಿ, ಖಜಾಂಚಿ ಸ್ಟ್ಯಾನಿ ಡಿ ಮೆಲ್ಲೋ, ಸದಸ್ಯರಾದ ಫಿಲಿಪ್ ಡಿ. ಕೋಸ್ತಾ, ಮಹೇಶ್ ಹೆಗ್ಡೆ, ಆರ್ಚಿಬಾಲ್ಡ್ ಕ್ವಾಡ್ರಸ್, ಮಲ್ಯಾಡಿ ಸೀತಾರಾಮ ಶೆಟ್ಟಿ, ಸುಭೋಧ್ ಕುಮಾರ್ ಹೆಗ್ಡೆ, ವಾಲ್ಟರ್ ಡಿ. ಸೋಜಾ, ವಿಲ್ಟ್ರಡಾ ಡಿ ಸೋಜಾ ಮೊದಲಾದವರು ಉಪಸ್ಥಿತರಿದ್ದರು.

Exit mobile version