ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪಾಲಕ/ಪೋಷಕರಿಗಾಗಿ ಓರಿಯೆಂಟೇಶನ್ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಈ ಸಂದರ್ಭದಲ್ಲಿ ಐ.ಸಿ.ಎಸ್.ಇ ಪಠ್ಯಕ್ರಮ, ಪರೀಕ್ಷೆಗಳು, ವಿದ್ಯಾರ್ಥಿಗಳ ಮನೆಗೆಲಸ, ವಿದ್ಯಾರ್ಥಿಗಳ ವರ್ತನೆ ಮತ್ತು ದಿನಚರಿಯ ಕುರಿತು ಶಿಕ್ಷಕಿಯರಾದ ಶ್ರುತಿ, ಫರ್ನಾಜ್, ದೀಪಿಕಾ ಮತ್ತು ಜ್ಯೋತಿ ಜಿ. ಅವರು ಸಂಪೂರ್ಣವಾದ ಮಾಹಿತಿಯನ್ನು ಪಾಲಕರಿಗೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಅವರು ತಮ್ಮ ನುಡಿಯಲ್ಲಿ ‘ಪೋಷಕರು ಮತ್ತು ಶಾಲೆ ಒಟ್ಟಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಮಕ್ಕಳ ನಿಜವಾದ ಬೆಳವಣಿಗೆ ಸಾಧ್ಯ’ ಎನ್ನುತ್ತಾ ಪಾಲಕ/ಪೋಷಕರ ಶ್ರದ್ಧೆ ಮತ್ತು ಉತ್ಸುಕತೆಯನ್ನು ಶ್ಲಾಘಿಸಿದರು. ಮಕ್ಕಳಿಗೆ ನಾವೇ ಮಾದರಿಯಾಗಿ ಹೇಗೆ ಮಾರ್ಗದರ್ಶನ ಮಾಡಬಹುದೆಂಬುದರ ಬಗ್ಗೆ ಹೇಳುತ್ತಾ ಅವರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿದರು.
ವೇದಿಕೆಯಲ್ಲಿ ಆಡಳಿತಾಧಿಕಾರಿಯವರಾದ ವೀಣಾರಶ್ಮಿ ಎಂ., ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಸುಜಾತಾ ಸದಾರಾಮ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಶಿಕ್ಷಕಿಯವರಾದ ದೀಪಾ ಹಾಗೂ ರಶ್ಮಿ ನಿರೂಪಿಸಿದರು.

