Site icon Kundapra.com ಕುಂದಾಪ್ರ ಡಾಟ್ ಕಾಂ

ತ್ರಾಸಿ ಕಡಲ್ಕೊರೆತ ಪ್ರದೇಶಕ್ಕೆ ಮೀನುಗಾರಿಕೆ ಇಲಾಖೆ ಎಂಜಿನಿಯರ್‌ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರ ಸೂಚನೆ ಮೇರೆಗೆ ಕಡಲ್ಕೊರೆತದಿಂದ ಹಾನಿಗೊಳದ ಕುಂದಾಪುರ ತಾಲೂಕಿನ ತ್ರಾಸಿ, ಕಂಚು ಗೋಡು ಮತ್ತು ಹೊಸಪೇಟೆ ಭಾಗಗಕ್ಕೆ ಬಂದರು ಮತ್ತು ಮೀನುಗಾರಿಕೆ ಇಲಾಖೆ ಎಂಜಿನಿಯರ್ ಭಾನುಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಿಥುನ್ ಎಂ.ಡಿ. ಬಿಜೂರು ಮಾತನಾಡಿ, ತ್ರಾಸಿ, ಕಂಚುಗೋಡು ಮತ್ತು ಹೊಸಪೇಟೆ ಭಾಗದಲ್ಲಿ ಅಲ್ಲಲಿ ಕಡಲ್ಕೊರೆತ ಉಂಟಾಗಿ ತೀರ ಪ್ರದೇಶ ಬಹಳಷ್ಟು ಹಾನಿಯಾಗಿದೆ. ಮೀನುಗಾರರ ಮನೆ ಮತ್ತು ಬದುಕನ್ನು ರಕ್ಷಿಸುವ ನಿಟ್ಟಿನಲ್ಲಿ ಕಡಲ್ಕೊರೆತದಿಂದ ನಷ್ಟ ಉಂಟಾಗಿರುವ ತೀರ ಪ್ರದೇಶವನ್ನು ರಕ್ಷಿಸಲು ಕಲ್ಲಿನ ತಡೆಗೋಡೆ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂಜಿನಿ ಯರ್‌ಗೆ ಮನವಿ ಮಾಡಿದರು.

ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು

Exit mobile version