Kundapra.com ಕುಂದಾಪ್ರ ಡಾಟ್ ಕಾಂ

ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಾಲ್ಕನೇ ಶಾಖೆ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು :
ಉಪ್ಪುಂದ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಾಲ್ಕನೇ ಶಾಖೆ, ಸೋಲಾರ್ ಸಿಸ್ಟಮ್ ಸಂಪೂರ್ಣ ಹವಾ ನಿಯಂತ್ರಣ ಹಾಗೂ ಗಣಕೀಕೃತ ಸೌಲೌಭ್ಯದೊಂದಿಗೆ ಸಿದ್ಧಾಪುರ ಶಾಖೆ ಉದ್ಘಾಟನಾ ಸಮಾರಂಭವು ಇತ್ತೀಚಿಗೆ ತ್ರಿಶಕ್ತಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಎಸ್. ಸಚ್ಚಿದಾನಂದ ಅವರು ಚಾತ್ರ ಸಿದ್ದಾಪುರ ಶಾಖೆ ಉದ್ಘಾಟಿಸಿ ಮಾತನಾಡಿ, ಶ್ರಮಹಿಸಿ ದುಡಿದಾಗ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಗೋವಿಂದ ಬಾಬು ಪೂಜಾರಿ ಸಾಕ್ಷಿಯಾಗಿದ್ದಾರೆ. ಅವರು ಅನೇಕ ಉದ್ಯಮದಲ್ಲಿ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕೂಡ ಒಂದಾಗಿದೆ. ಗೋವಿಂದ ಬಾಬು ಪೂಜಾರಿ ಅವರು ಅನೇಕ ದಾನ ಧರ್ಮಗಳನ್ನು ಮಾಡಿದ್ದಾರೆ. ಅವರ ಇನ್ನಷ್ಟು ದಾನ ಧರ್ಮಗಳು ಸಮಾಜದ ಒಳ್ಳೆಯವರಿಗೆ ಸಿಗುವಂತಾಗಲಿ ಎಂದು ಹೇಳಿದರು.

ಈ ವೇಳೆ ತ್ರಿಶಕ್ತಿ ಕಟ್ಟಡದ ಮಾಲೀಕ ನಾರಾಯಣ ಶೆಟ್ಟಿ ಅವರನ್ನು ಸನ್ಮಾಸಿ, ಗೌರವಿಸಲಾಯಿತು.

ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ಸಿದ್ಧಾಪುರ ಗ್ರಾಪಂ ಅಧ್ಯಕ್ಷೆ ಶ್ರೀಲತಾ ಶೆಟ್ಟಿ, ಸಿದ್ಧಾಪುರ ಉದ್ಯಮಿ ಉಮೇಶ್ ರಾವ್, ನಾಗು ಕುಲಾಲ್, ಶ್ರೀಕಾಂತ್ ನಾಯಕ್, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಾಲಚಂದ್ರ ಭಟ್, ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ್, ಉಡುಪಿ ಉದ್ಯಮಿ ಗೀತಾಂಜಲಿ ಸುವರ್ಣ, ಜಿಪಂ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಎಲ್.ಐ.ಸಿ ಭೋಜ್ ಶೆಟ್ಟಿ ಸಿದ್ಧಾಪುರ, ಉಳ್ಳೂರು, ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಅಧ್ಯಕ್ಷ ರಾಜೇಶ್ ಹೆಬ್ಬಾರ್, ಸಿದ್ದಾಪುರ ಗ್ರಾ.ಪಂ ಉಪಾಧ್ಯಕ್ಷ ಕೃಷ್ಣ ಪೂಜಾರಿ, ಸಾಮಾಜಿಕ ಹೋರಾಟಗಾರ ಸುದರ್ಶನ್ ಶೆಟ್ಟಿ ಬಾಳೆಬೇರು, ಉಳ್ಳೂರು 74 ಗ್ರಾ.ಪಂ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಕಟ್ಟಿನ್ ಬೈಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಪೂಜಾರಿ ತ್ರಾಸಿ, ಜಯರಾಮ್ ಶೆಟ್ಟಿ, ರಾಘವೇಂದ್ರ ಎಂ.ಪೂಜಾರಿ, ದೇವನ್ ಕೆ.ಪೂಜಾರಿ, ಮಾಲತಿ ಪೂಜಾರಿ, ಪಾರ್ವತಿ ಪೂಜಾರಿ, ರಾಮ ಗಾಣಿಗ, ಮೂಕಾಂಬು ಪೂಜಾರಿ, ಪದ್ಮಾ ಎಚ್., ಮಂಜುನಾಥ ರಾಮ ನಾಯ್ಕ, ಗೋವಿಂದ ಎನ್.ಪೂಜಾರಿ, ಲಾರೆನ್ಸ್ ಫೆರ್ನಾಂಡೀಸ್, ನಾಗರಾಜ್ ಯಡ್ತರೆ, ಅಂಬರೀಶ್ ಸೇರಿದಂತೆ ಹಲವರು ಇದ್ದರು.

Exit mobile version