Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರವು ಇತ್ತೀಚಿಗೆ ನಡೆಯಿತು.

ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರರಾದ ಮೈಸೂರಿನ ಸತೀಶ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಮಾರ್ಗಗಳು ಮತ್ತು ಜೀವನ ಕೌಶಲ್ಯಗಳ ಕುರಿತಾದ ವಿಚಾರಗಳ ಬಗ್ಗೆ ಉಪಯುಕ್ತ ತರಬೇತಿ ನೀಡಿದರು.

ಶಾಲೆಯ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ತರಬೇತುದಾರರಾದ ಸತೀಶ್‌ ಅವರ ಕೊಡುಗೆ ಬಹುಮೂಲ್ಯವಾದುದು. ವರ್ಷಪೂರ್ತಿ ಅಧ್ಯಯನದಲ್ಲಿ ತೊಡಗುವಂತೆ ಮಾಡಲು, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರರ ಮಾರ್ಗದರ್ಶನದಲ್ಲಿ ಶಾಲಾರಂಭದಲ್ಲಿಯೇ ಈ ಕಾರ್ಯಾಗಾರವನ್ನು ನಡೆಸಲಾಯಿತು.

ಅಧ್ಯಯನದ ತಂತ್ರಗಳು, ಏಕಾಗ್ರತೆಯನ್ನು ಹೊಂದುವ ಮಾರ್ಗಗಳು, ಓದುವಿಕೆಯ ವೇಗವನ್ನು ಹೆಚ್ಚಿಸಿಕೊಳ್ಳುವ ಕೌಶಲ್ಯಗಳು, ಅತ್ಯುತ್ತಮ ಆಹಾರ ಪದ್ಧತಿಗಳು, ಜೀವನ ಕೌಶಲ್ಯಗಳು, ಸ್ವಪ್ರೇರಣೆಯ ತಂತ್ರಗಳು, ಸ್ಮರಣಶಕ್ತಿಯನ್ನು ಹೆಚ್ಚಿಸುವ ತಂತ್ರೋಪಾಯಗಳು, ಸುಲಭ ಲೆಕ್ಕಾಚಾರದ ಮಾರ್ಗೋಪಾಯಗಳು ಇತ್ಯಾದಿ ವಿಚಾರಗಳ ಕುರಿತಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.

ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕರು ಮತ್ತು ಶಿಬಿರಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Exit mobile version