Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ಮಲಗಿದ್ದ ದನವನ್ನು ಕದ್ದೋಯ್ದ ಕಳ್ಳರು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಉಪ್ಪುಂದ ಗ್ರಾಮದ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಮುಖಮಂಟಪದ ಎದುರು ಮಲಗಿದ್ದ ದನವನ್ನು ಬುಧವಾರದಂದು ಮುಂಜಾನೆ ಕಳ್ಳರು ಕದ್ದೊಯ್ದಿದ್ದಾರೆ. ಈ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ.

ಬೆಳಗಿನ ಜಾವ ಕಾರಿನಲ್ಲಿ ಬಂದ ಮೂವರು ದುರುಳರು ಮಾಂಸ ಮಾಡುವ ಉದ್ದೇಶದಿಂದ ಹೊಂಚುಹಾಕಿ, ಮಲಗಿದ್ದ ದನವನ್ನು ಹಿಡಿದು ಕಾರಿನಲ್ಲಿ ‌ ಹಿಂಸಾತ್ಮಕವಾಗಿ ತುರುಕಿಕೊಂಡು ಹೋಗಿರುವುದು ಕಂಡುಬಂದಿದೆ.

 ಈ ಬಗ್ಗೆ ಬೈಂದೂರು ಪೊಲೀಸ್ ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version