ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘ ಬೆಂಗಳೂರು ಹೋಟೆಲ್ ಕಾರ್ಮಿಕರ ರಾಜ್ಯ ಸಂಘಟನೆ ಪ್ರತಿಭಾ ಪುರಸ್ಕಾರ ಹಾಗೂ ಸರ್ಕಾರದ ಅಂಬೇಡ್ಕರ್ ಸಹಾಯ ಯೋಜನೆಯ ನೋಂದಣಿ ಮತ್ತು ವಿತರಣಾ ಕಾರ್ಯಕ್ರಮ ಜುಲೈ 17ರಂದು ಕೊಲ್ಯಮಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಲಿದೆ.

ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಶಿವಯೋಗಿ ದುರ್ಗಾ ನಂದ ಸ್ವಾಮೀಜಿ ಅವರು ಶಿವಗಿರಿ ಮಠ ಕೊಂಡಣ ಅಮೃತ ಹಸ್ತದಿಂದ ಬಿಡುಗಡೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ವೇಳೆ ಚಂದ್ರಶೇಖರ್ ಉಚ್ಚಿಲ ಆಡಳಿತ ಮುಖ್ಯಸ್ಥರು ಗೆಜ್ಜೆ ಗಿರಿ ತಾರಾನಾಥ ಆಳ್ವ, ಸಾಮಾಜಿಕ ಕಾರ್ಯಕರ್ತರು ಮೋಹನ್ ಟಿ. ಹೆಚ್., ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಜಯನಂದ್ ಭಂಡಾರಿ, ಚೆನ್ನಯ್ಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಶೆಟ್ಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಶೈಲೇಶ್ ಜಿಲ್ಲಾ ನಿರ್ದೇಶಕರು ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್ ಕಾರ್ಮಿಕರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳು ಆದರದ ಸ್ವಾಗತ ಕೋರಿದರು.