ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿಎ ಫೌಂಡೇಶನ್ ಫಲಿತಾಂಶದಲ್ಲಿ ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ಪೂರ್ಣ ಭಟ್ ಕೆ.ಎಲ್ (264), ಸೃಜನ್ ಎಸ್. ಭಟ್ (249), ಅಫ್ಸರ್ ಫಾಹಿಮ್ (238), ಬಸವ ಪ್ರಸಾದ್ ಕಾಜಿ (238), ಪ್ರಭವ್ ಗೋಪಾಲ್ ಶೆಟ್ಟಿ (233), ಸೌರವ್ ರವಿ ಶೇಟ್ (225), ಆರ್ಯ ಬಿ.ವಿ. (212), ಹೆಗ್ಡೆ ಪ್ರತ್ವಿಕ್ (212), ಶ್ರದ್ಧಾ ಪ್ರಕಾಶ್ ಅಂಗಡಿ (210), ರೇಷ್ಮ ಜಿ.ಕೆ. (204), ಶ್ರೀಕಾರ್ ದುಬೀರ (202) ಅಂಕಗಳನ್ನು ಗಳಿಸುವುದರ ಮೂಲಕ ಅರ್ಹತೆಯನ್ನು ಗಳಿಸಿಕೊಂಡಿರುತ್ತಾರೆ.
ಪರೀಕ್ಷೆ ಬರೆದಿರುವ 20 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಅರ್ಹತೆಯನ್ನು ಗಳಿಸಿರುತ್ತಾರೆ. ರಾಷ್ಟ್ರೀಯ ಮಟ್ಟದ ಒಟ್ಟು ಫಲಿತಾಂಶದಲ್ಲಿ 15% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ಕ್ರಿಯೇಟಿವ್ ವಿದ್ಯಾ ಸಂಸ್ಥೆಯಲ್ಲಿ ಪರೀಕ್ಷೆ ತೆಗೆದುಕೊಂಡ ಒಟ್ಟು ವಿದ್ಯಾರ್ಥಿಗಳಲ್ಲಿ 55% ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ಗಮನಾರ್ಹವಾಗಿದೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು, ಪರೀಕ್ಷಾ ಸಂಯೋಜಕರಾದ ರಾಘವೇಂದ್ರ ಬಿ. ರಾವ್ (ಅನು ಬೆಳ್ಳೆ) ಅವರು ಶ್ಲಾಘಿಸಿದ್ದಾರೆ.

