ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಎಲ್‌ಕೆಜಿ ವಿಭಾಗದಲ್ಲಿ ‘ಬೆಂಕಿ ಬಳಸದೆ ಅಡುಗೆ’ಚಟುವಟಿಕೆಯನ್ನು ನಡೆಸಲಾಯಿತು.
ಎಲ್ಲಾ ಪುಟಾಣಿಗಳು ಈ ಚಟುವಟಿಕೆಯಲ್ಲಿ ಸಂತಸದಿಂದ ಭಾಗವಹಿಸುವುದರ ಜೊತೆಗೆ ಸುಲಭವಾಗಿ ಬೆಂಕಿ ಬಳಸದೆ ಅಡುಗೆ ತಯಾರಿಸುವುದರ ಕುರಿತು ಜ್ಞಾನವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ ಹಾಗೂ ಕೆಜಿ ವಿಭಾಗದ ಶಿಕ್ಷಕಿಯರು ಉಪಸ್ಥಿತಿಯಲ್ಲಿದ್ದರು.

