Site icon Kundapra.com ಕುಂದಾಪ್ರ ಡಾಟ್ ಕಾಂ

ಆರ್.ಎನ್.‌ಶೆಟ್ಟಿ‌ ಪ.ಪೂ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಸಾರ್ವಜನಿಕ ಭಾಷಣ ಸ್ಪರ್ಧೆಯ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಆರ್. ಎನ್.‌ಶೆಟ್ಟಿ‌ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‌ಸಿಐ ಕುಂದಾಪುರ ಲೀಜನ್ ನ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಸಾರ್ವಜನಿಕ ಭಾಷಣ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಎಸ್‌ಎನ್‌ಆರ್‌ ಎಸ್‌ಎನ್‌ಆರ್‌ ಎಮ್. ಆರ್. ಜಯೇಶ ಅವರು ದೀಪ ಬೆಳಗಿಸುವುದರ ಮೂಲಕಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾರ್ವಜನಿಕ ಭಾಷಣ ಕಲೆಯ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ತಿಳಿಸಿದರು.

ಎಸ್‌ಸಿಐ ನ ರಾಷ್ಟ್ರೀಯ ಸಂಯೋಜಕರಾದ ಎಸ್‌ಎನ್‌ಆರ್‌ ಗಿರೀಶ್ ಶಾನಭಾಗ್ ಅವರು ಸ್ಪರ್ಧಾ ಸರಣಿಗೆ ಶುಭ ಹಾರೈಸಿದರು. ಎಸ್‌ಸಿಐ ನ Area-G ಇದರ ರಾಷ್ಟ್ರೀಯ ಉಪಾಧ್ಯಕ್ಷ ಎಸ್‌ಎನ್‌ಆರ್‌ ಎಸ್‌ಎನ್‌ಆರ್‌ ಸಿದ್ಧಗಂಗಯ್ಯ, ಎಸ್‌ಸಿಐ ಕೋಟಾ ಲೀಜನ್ ನ ಅಧ್ಯಕ್ಷ ಎಸ್‌ಎನ್‌ಆರ್‌ ಕೇಶವ ಆಚಾರ್, ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಓರಿಯಂಟೇಶನ್ ಮತ್ತು ಯುತ್ ಎಫೇರ್ಸ್ ನ ರಾಷ್ಟ್ರೀಯ ನಿರ್ದೇಶಕರಾದ ಎಸ್‌ಎನ್‌ಆರ್‌. ಪಿಪಿಎಫ್‌. ಹುಸೇನ್ ಹೈಕಾಡಿ ಅವರು ಶುಭ ಹಾರೈಸಿದರು. ವಿದ್ಯಾರ್ಥಿನಿ ಶರಧಿ ಪ್ರಾರ್ಥಿಸಿದರು.

ಕಾಲೇಜು‌ ಮಟ್ಟದಲ್ಲಿ ನಡೆದ ಆರಂಭಿಕ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮೇಘನಾ, ಸಹನಾ‌ ಮತ್ತು ಅನ್ಸಾ ಅವರಿಗೆ ಬಹುಮಾನ‌ ವಿತರಣೆ ನಡೆಸಲಾಯಿತು.‌

ಇಂಗ್ಲೀಷ್ ಉಪನ್ಯಾಸಕಿ‌ ಸುಮತಿ‌ ಶೆಣೈ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಕ್ಷತಾ ಕೆ.ಏನ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನೀಸ್ ನತಾಶಾ ಡಿಸೋಜ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.

ಸೀನಿಯರ್ ಛೇಂಬರ್ಸ್ ಕುಂದಾಪುರದ ಅಧ್ಯಕ್ಷರಾದ ಎಸ್‌ಎನ್‌ಆರ್‌ರಾಘವೇಂದ್ರ ಚರಣ ನಾವಡ ಧನ್ಯವಾದ ಸಲ್ಲಿಸಿದರು.  ಹಿಂದಿ ಉಪನ್ಯಾಸಕಿ ಜಯಶೀಲಾ ಪೈ ಕಾರ್ಯಕ್ರಮ ನಿರೂಪಿಸಿದರು.

Exit mobile version