Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ವೆಂಕಟರಮಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮುಂಗಾರು ಪರ್ವದ ಸಂಭ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ: ಇ
ಲ್ಲಿನ ಶ್ರೀ ವೆಂಕಟರಮಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ‘ಮುಂಗಾರು ಪರ್ವ’ವನ್ನು ಆಚರಿಸಲಾಯಿತು.

‘ಹಸಿರೇ ಉಸಿರು ಎಂಬ ಧೈಯ ವಾಕ್ಯದೊಂದಿಗೆ ಪೂರ್ವ ಪ್ರಾಥಮಿಕ ‌ ವಿದ್ಯಾರ್ಥಿಗಳು ಹಾಡು ನರ್ತನದೊಂದಿಗೆ ಪರಿಸರವನ್ನು ಹಸಿರಾಗಿರಿಸಿದರು. ಕಾಗದದ ದೋಣಿಯಾಟವನ್ನಾಡಿ ಖುಷಿಪಟ್ಟರು.

ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಕೃಷ್ಣ ಆಡಿಗರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ರೇಷ್ಮಾ ಡಿ. ಸೋಜರವರು ವಿದ್ಯಾರ್ಥಿಗಳಿಗೆ ಮಳೆಗಾಲದ ಪ್ರಾಮುಖ್ಯತೆಯನ್ನು ವಿವರಿಸಿದರು.

ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಪ್ರಮೀಳಾ ಡಿ’ಸೋಜಾ, ಸಹಶಿಕ್ಷಕಿಯರು ಹಾಗೂ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Exit mobile version