Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಗಿಳಿಯಾರು ಕುಶಲ ಹೆಗಡೆ ರೋಟರಿ ಭವನದಲ್ಲಿ 2025 – 26ನೇ ಸಾಲಿನ ಕುಂದಾಪುರದ ರೋಟರಿ ಕ್ಲಬ್ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮ ನೆರವೇರಿತು.

ರೊ. ನಾಗರಾಜ್ ಶೆಟ್ಟಿ ಅವರು ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದರು.

ಕಾರ್ಯಕ್ರಮಕ್ಕೆ ಪದಪ್ರದಾನ ಅಧಿಕಾರಿಯಾಗಿ ರೋಟರಿ ಜಿಲ್ಲೆ 3182 ಇದರ ವಲಯ 1ರ ಸಹಾಯಕ ಗವರ್ನರ್ ಪಿ.ಎಚ್.ಎಫ್. ರೊ. ಐ ನಾರಾಯಣ್ ಅವರು ನೆರವೇರಿಸಿಕೊಟ್ಟರು.

ಮುಖ್ಯ ಅತಿಥಿಗಳಾದಂತಹ  ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ನಿಜ ಜೀವನದ ಸ್ವಾರಸ್ಯವನ್ನು ರೋಟರಿಯೊಂದಿಗೆ ಕೈ ಜೋಡಿಸಿ ಅತ್ಯುತ್ತಮವಾದಂತಹ ಮಾತುಗಳನ್ನಾಡಿದರು.

ನಿರ್ಗಮನ ಅಧ್ಯಕ್ಷರಾದಂತಹ ರೊ.ಲಿಯಾಕತ್ ಅಲಿ ಅವರು ಸ್ವಾಗತ ಭಾಷಣವನ್ನು ಮಾಡಿ ಶುಭ ಹಾರೈಸಿದರು.

ನಿರ್ಗಮನ ಕಾರ್ಯದರ್ಶಿಯಾದಂತಹ ಸಚ್ಚಿದಾನಂದ ಅವರು 2024- 25ನೇ ಸಾಲಿನ ವರದಿಯನ್ನು ವಾಚಿಸಿದರು . ವಲಯ ಸೇನಾನಿ  ಪಿ. ಎಚ್. ಎಫ್. ರೊ. ಅಬ್ದುಲ್ ಬಶೀರ್ ಅವರು ಶುಭ ಹಾರೈಸಿದರು. ಕ್ಲಬ್‌ನ ಕಾರ್ಯದರ್ಶಿ  ರೊ. ಸರ್ವೋದಯ ಪೂಜಾರಿ ಧನ್ಯವಾದ ಗೈದರು. ರೋಟರಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಯಿತು.

Exit mobile version