Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಅಂಗಡಿಗೆ ನುಗ್ಗಿ ಕಳ್ಳತನಗೈದಿದ್ದ ನಾಲ್ವರ ಬಂಧನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ನಗರದ ಸಂತೆ ಮಾರ್ಕೆಟ್ ಬಳಿ ಜು.14ರ ಮಧ್ಯರಾತ್ರಿ  2.30 ಸುಮಾರಿಗೆ ಅಂಗಡಿಯ ಶಟ‌ರ್ ಬಾಗಿಲು ಒಡೆದು, 95 ಸಾವಿರ ರೂ. ಮೌಲ್ಯದ ತಾಮ್ರದ ವಯರ್‌, ಹಿತ್ತಾಳೆಯ ವಸ್ತುಗಳನ್ನು ಕಳ್ಳತನಗೈದಿದ್ದ ನಾಲ್ವರು ಕಳ್ಳರನ್ನು ಕುಂದಾಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಆರೋಪಿಗಳಾದ ಮಂಗಳೂರಿನ ಸರ್ಫರಾಜ್ (33), ಜಾಕೀರ್ (36), ಮೊಹಮ್ಮದ್ ಅಲ್ಪಾಜ್ (26) ಹಾಗೂ ಮಂಜನಾಡಿಯ ಮೊಹಮ್ಮದ್ ರಿಯಾಜ್ (44) ಅವರನ್ನು ಉಡುಪಿಯ ಸಂತೆಕಟ್ಟೆಯಲ್ಲಿ ಬಂಧಿಸಲಾಗಿದೆ.

ಕುಂದಾಪುರ ನಗರ ಠಾಣಾ ಎಸ್‌ಐಗಳಾದ ನಂಜಾ ನಾಯ್ಕ, ಪುಷ್ಪಾ, ಸಂಚಾರ ಎಸ್‌ಐ ನೂತನ್, ಸಿಬಂದಿ ಮೋಹನ್, ಸಂತೋಷ್, ಪ್ರೀನ್ಸ್, ನಾಗೇಶ್, ಮಹಾಬಲ, ರೇವತಿ, ಘನಶ್ಯಾಮ್, ಸತೀಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಆರೋಪಿಗಳಿಂದ 50 ಕೆಜಿ ತೂಕದ ತಾಮ್ರದ ಸರಿಗೆ, 34 ಕೆಜಿ ತೂಕದ ತಾಮ್ರದ ಸರಿಗೆ, 64 ಕೆಜಿ ತೂಕದ ಹಿತ್ತಾಳೆಯ ವಸ್ತು, 20 ಕೆಜಿ ತೂಕದ ಅಲ್ಯೂಮಿನಿಯಂ ವಸ್ತು, ಫ್ರಿಜ್ ಕಂಪ್ರಸರ್, 45 ಹಳೆಯ ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

Exit mobile version