Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪ್ರ ಭಾಷೆಗೆ ವಿಶ್ವಮಾನ್ಯತೆ: ಆನಂದ್ ಸಿ. ಕುಂದರ್

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಕುಂದಾಪ್ರ ಭಾಷೆ, ಇಲ್ಲಿನ ವಿವಿಧ ಜನಾಂಗದ ಬದುಕಿನ ಜೀವನ ಪರಿ ವಿಶ್ವಮಟ್ಟದಲ್ಲಿ ಪಸರಿಸಿಕೊಂಡಿದೆ. ಈ ಬಗ್ಗೆ ಅಧ್ಯಯನ ಅಗತ್ಯ  ಮುಂದಿನ ತಲೆಮಾರಿಗೆ ಅನುಕೂಲವಾಗಲಿದೆ ಎಂದು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಅಭಿಪ್ರಾಯಪಟ್ಟರು.

ಅವರು ಬುಧವಾರ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಆ.10ರಂದು ಕೋಟದ ಹಂದಟ್ಟಿನಲ್ಲಿ ನಡೆಯಲಿರುವ  ಊರ್ ಕೇರಿ ಬದ್ಕಿನ ಹಬ್ಬ ಎಂಬ ಆಸಾಡಿ ಒಡ್ರ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ನಮ್ಮ ಜೀವನ ಪದ್ದತಿ, ಭಾಷೆ ಜಗತ್ತನಲ್ಲಿ ಶೇಷ್ಠತೆ ಪಡೆದುಕೊಂಡಿದೆ. ಅದನ್ನು ಉಳಿಸಿ ಬೆಳೆಸಬೇಕಾದರೆ ಈ ರೀತಿಯ ಕಾರ್ಯಕ್ರಮಗಳು ಆಗಿಂದಾಗ ನಡೆಯುತ್ತಿರಬೇಕು. ನಮ್ಮ ಭಾಷೆ, ಬದುಕಿನ ವಿಚಾರಧಾರೆಗಳು ಉಳಿಯಬೇಕಾದರೆ ನಮ್ಮ ಮನೆಯಲ್ಲಿ ಅದನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿ ಯುವ ಜನಾಂಗಕ್ಕೆ ಊಣಬಡಿಸಬೇಕು ಎಂದು ಪಂಚವರ್ಣ ಮಹಿಳಾ ಮಂಡಲದ ಈ ರೀತಿಯ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಇದೇ ವೇಳೆ ಗಣ್ಯರ ಸಮ್ಮುಖದಲ್ಲಿ ಆನಂದ್ ಸಿ ಕುಂದರ್ ಗೃಹದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ಚರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಮಣೂರು ಭಾಸ್ಕರ್ ಶೆಟ್ಟಿ, ಕೋಟ ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ, ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಪಂಚವರ್ಣ ಪೋಷಕರಾದ ವಿಷ್ಣುಮೂರ್ತಿ ಮಯ್ಯ ಮಣೂರು, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಯು ವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ, ಪ್ರಾಸ್ತಾವನೆ ಸಲ್ಲಿಸಿದರು. ಸಂಚಾಲಕಿ ಸುಜಾತ ಎಂ. ಬಾಯರಿ ನಿರೂಪಿಸಿ, ಕಾರ್ಯದರ್ಶಿವಸಂತಿ ಹಂದಟ್ಟು ವಂದಿಸಿದರು.

ಹೊಯ್ ಇಲ್ ಕೇಣಿ ನಮ್ ಹೆರಿಯರ್ ಕೊಟ್ಟ ಬಳುವಳಿ ಇದ್  ನಮ್ ಕುಂದಾಪುರ ಭಾಷಿ ಮತ್ ಬದ್ಕ್, ಆಸಾಡಿ ತಿಂಗ್ಳ್ ಬಂತ್ತೆಂದ್ರೆ ಕಷ್ಟದ ದಿನಗಳ್ ಆಗಿನ್ ಕಾಲದ್ ಹೆರಿಯರ್ ಎದ್ರಿಸ್ಕಂಡ್ ಬಂದಿರೇ, ಹೊಟ್ಟಿ ಗಿಟ್ಟಿಗ್ ಕುಳ್ ಇಲ್ದಿದ್ರು ಭಾಷಿ , ಬದ್ಕು ರೀತಿಯನ್ ಬಾರಿ ಸಾಪ್ ಮಾಡ್ಕಂಡ್ ಬಂದಿರ್ ಆಸಾಡಿ ತಿಂಗ್ಳಗ್ ಕರಾವಳಿ ಕಡ್ಲ್ ಬದೆಗ್ ಮೀನ್ ತಣ್ಣಗ್ ಇರತ್, ಮೇಲ್ ತಾರ್ ಕೃಷಿ ಸತೆ ಆಯ್ಕ್ ಅಷ್ಟೆ ಅಲ್ದೆ ಅದ್ಕೆ ಆಸಾಡಿ ಹಬ್ಬು ತುಂಬಾ ಗಮ್ಮತ್ ಮಾಡ್ಕಂಡ್ ಕಳಿತ್ರ್ ಇದನ್ನಾರು ನಾವ್ ಇದನ್ನೆಲ ಉಳ್ಸಕಂಡ್ ಬರ್ಕೆ: ಕುಂದಾಪ್ರ ಭಾಷೆಯಲ್ ಭಾಷಾ ಸೋಗಡಿಗಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರೃತ ಮಣೂರು ಜಯರಾಮ್ ಶೆಟ್ಟಿ

Exit mobile version