Site icon Kundapra.com ಕುಂದಾಪ್ರ ಡಾಟ್ ಕಾಂ

ಅ.13ಕ್ಕೆ ಶಿಕ್ಷಕ ಸಂದೇಶ್ ನಾಯ್ಕ್ ಹಕ್ಲಾಡಿ ಅವರ ʼಇದೊಳ್ಳೆ ವರಸೆʼ ಕೃತಿ ಬಿಡುಗಡೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕ್ರಿಯೇಟಿವ್‌ ಪುಸ್ತಕ ಮನೆ ಪ್ರಕಾಶಿಸಿದ, ಶಿಕ್ಷಕ, ಅಂಕಣಗಾರ ಸಂದೇಶ್ ಎಚ್. ನಾಯ್ಕ್  ಹಕ್ಲಾಡಿ ಅವರು ಚೊಚ್ಚಲ ಕೃತಿ ‘ಇದೊಳ್ಳೆ ವರಸೆʼ ಅ.13ರಂದು ಕಾರ್ಕಳ ಕ್ರಿಯೇಟಿವ್ ಪ.ಪೂ ಕಾಲೇಜಿನಲ್ಲಿ ಬಿಡುಗಡೆಗೊಳ್ಳಲಿದೆ.

ಸಂದೇಶ್ ನಾಯ್ಕ್ ಅವರು ಕಳೆದ 8 ವರ್ಷಗಳಿಂದ ಹೊಸದಿಗಂತ ಪತ್ರಿಕೆಯಲ್ಲಿ ಪ್ರತಿ ಸೋಮವಾರ ‘ವಾರದ ವರಸೆ’ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಈ ಅಂಕಣದ ಆಯ್ದ 30 ಲೇಖನಗಳನ್ನು ‘ಇದೊಳ್ಳೆ ವರಸೆʼ ಕೃತಿಗೆ ಆಯ್ದುಕೊಳ್ಳಲಾಗಿದೆ.

ಓದುವ & ಖರೀದಿಸುವ ಆಸಕ್ತಿ ಉಳ್ಳವರು 9606474289 ಸಂಖ್ಯೆಯನ್ನು ಸಂಪರ್ಕಿಸಿ ಪುಸ್ತಕ ಕಾಯ್ದಿರಿಸಬಹುದು. 150 ಮುಖಬೆಲೆಯ ಪುಸ್ತಕ ಬಿಡುಗಡೆ ಪೂರ್ವದಲ್ಲಿ 120 ರುಪಾಯಿಗೆ ಲಭ್ಯವಿದೆ!

ಪ್ರತೀ ವಿಷಯಕ್ಕೂ ಬೇರೆ ಬೇರೆ ಆಯಾಮಗಳಿರುತ್ತವೆ. ಒಂದು ವಿಷಯ ಒಬ್ಬರಿಗೆ ಕಂಡ ರೀತಿಯಲ್ಲಿ ಇನ್ನೊಬ್ಬರಿಗೆ ಕಾಣಬೇಕೆಂದಿಲ್ಲ. ಹಾಗೆ ಅಂಥ ಕೆಲವು ವಿಷಯಗಳನ್ನು ವ್ಯಂಗ್ಯ-ವಿಡಂಬನೆ, ಚುಟುಕ, ಹಾಸ್ಯ ವಿಶ್ಲೇಷಣೆಯ ಚೌಕಟ್ಟಿನಲ್ಲಿ ಹಿಡಿದಿಡುವ ಪ್ರಯತ್ನವೇ, ‘ಇದೊಳ್ಳೆ ವರಸೆ’ ಪುಸ್ತಕದ ಬರಹಗಳು.

Exit mobile version