Kundapra.com ಕುಂದಾಪ್ರ ಡಾಟ್ ಕಾಂ

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ, ಮೂಲಭೂತ ಸೌಕರ್ಯ ಅಭಿವೃದ್ಧಿಯ ಚರ್ಚೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಲ್ಫ್:
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ವಿಶ್ವದ ಕುಂದಗನ್ನಡಿಗರನ್ನು ಒಂದುಗೂಡಿಸಿ ಅಂತರ್ಜಾಲದ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು.

ಮುಖ್ಯ ಅತಿಥಿಗಳಾದ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ಅವರು ನಮ್ಮ ಸಂಸ್ಥೆ ಈ ಹಿಂದೆ ಇಟ್ಟ ಬೇಡಿಕೆಗಳಿಗೆ ಒತ್ತು ನೀಡುವುದರ ಬಗ್ಗೆ ನಿಸ್ವಾರ್ಥ ಹೋರಾಟ ಮಾಡುತ್ತೇನೆ ಎಂದರು ಜೊತೆಗೆ ಕುಂದಾಪ್ರ ಕನ್ನಡ ಅಧ್ಯಾಯನ ಪೀಠದ ಕೆಲಸಗಳಿಗೆ ವೇಗವನ್ನು ನೀಡುದರ ನಮ್ಮ ಭಾಷೆಯ ಯಾವುದೇ ಕೆಲಸಗಳಿಗೆ ನಿಮ್ಮದೊಂದಿಗೆ ಸದಾ ಇರುತ್ತೇನೆ ಎಂದರು.

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಸ್ಥಾಪಕ ಅಧ್ಯಕ್ಷರಾದ ಸದಾಸ್ ದಾಸ್ ಅವರು ಕಾರ್ಯಕ್ರಮದ ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಸ್ಥೆಯಿಂದ ಮೊದಲು ಧ್ವನಿ ಎತ್ತಿದ ಬೈಂದೂರು ವಿಮಾನ ನಿಲ್ದಾಣ ಮತ್ತು ಉನ್ನತ ದರ್ಜೆಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬಗ್ಗೆ ಮರು ಧ್ವನಿಯಾಗಿ ಅತಿಥಿಗಳಿಗೆ ಮನವರಿಕೆ ಮಾಡಿದರು. ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಬೈಂದೂರಿನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆ ನಡೆದು ಬಂದ ದಾರಿ ಬಗ್ಗೆ ಮಾತನಾಡಿದರು.

ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಮಾತನಾಡಿ, ಈಗಾಗಲೇ ಬೇಡಿಕೆ ಇಟ್ಟ ಬೈಂದೂರಿನ ವಿಮಾನ ನಿಲ್ದಾಣ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿರುವುದಾಗಿ ಹೇಳಿದರು ಮತ್ತು ಸಮೃದ್ದ ಬೈಂದೂರಿನ ಕಾರ್ಯವೈಕರಿಗಳನ್ನು ವಿವರಿಸಿ ಕುಂದಾಪ್ರ ಕನ್ನಡ ಭಾಷೆಗೆ ಇರುವ ಶಕ್ತಿ ಇಂದು ಎಲ್ಲವನ್ನು ಮೀರಿ ಬಹಳ ಎತ್ತರಕ್ಕೆ ಬೆಳೆಯುತ್ತಿದೆ ಅದಕ್ಕೆ ಮೂಲ ಕಾರಣ ವಿಶ್ವದಾದ್ಯಂತ ಇರುವ ಕುಂದಗನ್ನಡಿಗರು ಎಂದು ಹೇಳುತ್ತಾ ನಿಮ್ಮ ಎಲ್ಲಾ ಬೇಡಿಕೆಗಳಿಗೆ ಸದಾ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಕುಂದಾಪುರದ ಅಸೋಡು ಮೂಲದ ಪ್ರಸ್ತುತ ಯುಕೆ ಯಲ್ಲಿ ಪ್ರಸಿದ್ದ ವೈದ್ಯರು ಮತ್ತು ವಿಜ್ಞಾನಿಗಳಾದ ಅನಂತರಾಮ್ ಶೆಟ್ಟಿ ಮಾತನಾಡಿ ನಮ್ಮ ಪರಿಸದಲ್ಲಿ ನಿರ್ಮಾಣ ಆಗಬೇಕಾಗಿರುವ ಉನ್ನತ ದರ್ಜೆಯ ಆಸ್ಪತ್ರೆ ಮತ್ತು ಕಾಲೇಜುಗಳ ಕುರಿತು ಅದರ ಯೋಚೆನೆ ಮತ್ತು ಯೋಜನೆಯ ಬಗ್ಗೆ ವಿವರಿಸಿ ಅದರ ನನಸಿಗಾಗಿ ಈಗಾಗಲೇ ಪ್ರಯತ್ನ ನಡೆಸುತ್ತಿದ್ದೇನೆ ಎಂದರು ಇದರಿಂದ ನಮ್ಮೂರು ಅಭಿವೃದ್ದಿ ಆಗಬೇಕು ಎಂದರು.

ನಮ್ಮ ಕುಂದಾಪ್ರ ಬಳಗ ಗಲ್ಫ್ ಇದರ ಪೋಷಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಸುಜಿತ್ ಶೆಟ್ಟಿ ಮತ್ತು ಸದಸ್ಯರಾದ ಮಂಜುನಾಥ ದೇವಾಡಿಗ, ಸತೀಶ್ ಹಂಗಳೂರು, ಚಂದ್ರಶೇಖರ ಕೋಡಿ, ನಿತ್ಯನಂದ, ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಯುಕೆಯಿಂದ ರಾಘವೇಂದ್ರ ಕಂಬ್ಳು, ಓಮಾನ್ ರಮಾನಂದ ಪ್ರಭು, ಕುವೈಟ್ ಸುರೇಶ್ ನೆರಂಬಳ್ಳಿ , ಸೌದಿ ಅರೇಬಿಯಾ ಸಂತೋಷ ಶೆಟ್ಟಿ ಮತ್ತು ಮೊಸಿನ್ ಬೈಂದೂರು, ಬೆಹರಿನ್ ದೇಶದಿಂದ ಪ್ರದೀಪ್ ಶೆಟ್ಟಿ ಮತ್ತು ಕಮಲಾಕ್ಷ ಅಮೀನ್, ಬೆಂಗಳೂರಿನಿಂದ ಶೀನ ದೇವಾಡಿಗ ಪ್ರಕಾಶ್ ಕೋಣಿ ಮತ್ತು ವಾಸುದೇವ ದೇವಾಡಿಗ, ಕುಂದಾಪುರದಿಂದ ಅರುಣ್ ಕುಮಾರ್ ಶಿರೂರು ಮತ್ತು ಸುನಿಲ್ ಬೈಂದೂರು ಹಲವಾರು ಕುಂದಗನ್ನಡಿಗರು ಭಾಗವಹಿಸಿದ್ದರು.

ಸ್ಥಾಪಕ ಅಧ್ಯಕ್ಷರಾದ ಸದಾನ್ ದಾಸ್ ಸ್ವಾಗತಿಸಿದರು ಮತ್ತು ಕಾರ್ಯದರ್ಶಿಗಳಾದ ಸುಧಾಕರ ಪೂಜಾರಿ ವಂದಿಸಿದರು. ವಿಘ್ನೇಶ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಕುಂದಾಪ್ರ ಡಾಟ್ ಕಾಂ ಪೋರ್ಟೆಲ್ ಮೂಲಕ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು.

Exit mobile version