Kundapra.com ಕುಂದಾಪ್ರ ಡಾಟ್ ಕಾಂ

ಉತ್ತಮ ಕೇಶರಾಶಿ ನಿಮ್ಮದಾಗಲು ಹೀಗೆ ಮಾಡಬಹುದು

* ನಿಮ್ಮ ಕೂದಲು ನೈಸರ್ಗಿಕ ಹೊಳಪು ಪಡೆಯಬೇಕಾದರೆ, ದಾಸವಾಳದ ಎಲೆಯನ್ನು ಮೊಸರಿನ ಜೊತೆ ಸೇರಿಸಿ ರುಬ್ಬಿ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ.

* ಕೂದಲಿನಲ್ಲಿ ಪದೇ ಪದೇ ಜಿಡ್ಡಿನಾಂಶ ಕಾಣಿಸಿಕೊಳ್ಳುತ್ತಿದ್ದರೆ, ನಿಂಬೆರಸವನ್ನು ಬಳಸಿ ಕೂದಲನ್ನು ತೊಳೆಯಿರಿ.

* ಕೂದಲು ಉದುರುವುದು, ತಲೆ ತುರಿಕೆ, ತಲೆ ಹೊಟ್ಟು ನಿವಾರಣೆಗೆ ರಾಮಬಾಣ ನೆಲ್ಲಿಕಾಯಿ. ನೆಲ್ಲಿಕಾಯಿಯನ್ನು ಪೇಸ್ಟ್ ಮಾಡಿ ಹಚ್ಚಬಹುದು ಅಥವಾ, ಅದನ್ನು ಎಣ್ಣೆಯ ಜೊತೆಗೆ ಕುದಿಸಿ ನಂತರ ಆ ಎಣ್ಣೆಯನ್ನು ಹಚ್ಚಬಹುದಾಗಿದೆ.

* ಶುದ್ಧವಾದ ತೆಂಗಿನ ಎಣ್ಣೆಯನ್ನು ಸಮರ್ಪಕವಾಗಿ ಬಳಸುತ್ತ ಬಂದರೆ, ಕೂದಲಿನ ಸೌಂದರ್ಯ ಹೆಚ್ಚುತ್ತದೆ. (ಕುಂದಾಪ್ರ ಡಾಟ್ ಕಾಂ)

* ಮೆಂತೆಕಾಳನ್ನು ನೆನೆಸಿ ಅದನ್ನು ರುಬ್ಬಿ ತಲೆಗೆ ಪ್ಯಾಕ್ ಹಾಕಿ ತೊಳೆಯುತ್ತ ಬಂದರೆ, ಒಣ ತ್ವಚೆಯ ಕಡಿಮೆಯಾಗುವುದರ ಜೊತೆಗೆ ಹೊಟ್ಟು ನಿವಾರಣೆಯಾಗುತ್ತದೆ.

* ಮೊಟ್ಟೆಯ ಬಿಳಿ ಭಾಗವನ್ನು ವಾರಕೊಮ್ಮೆ ತಲೆಗೆ ಹಚ್ಚಿ ಅರ್ಧಗಂಟೆಯ ನಂತರ ಅದನ್ನು ತೊಳೆಯಿರಿ. ಹೀಗೆ ಮಾಡುತ್ತ ಬಂದರೆ ಕೂದಲ ಗುಣಮಟ್ಟ ಹೆಚ್ಚುತ್ತದೆ.

* ಲೋಳೆಸರ(ಅಲೋವೆರಾ) ಕೂದಲು ಕವಲು ಒಡೆಯುವುದನ್ನು ತಡೆಯುತ್ತದೆ. ಅಲ್ಲದೇ ಕೂದಲನ್ನು ಮೃದುವಾಗಿಸುತ್ತದೆ.

* ಅಡುಗೆಗೆ ಬಳಸುವ ಕೊತ್ತಂಬರಿ ಸೊಪ್ಪು ಕೂದಲಿಗೆ ಒಳ್ಳೆಯದು. ಇದನ್ನು ಮೊಸರಿನೊಂದಿಗೆ ರುಬ್ಬಿ ತಲೆಗೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ.

Exit mobile version