Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪಾಲಕರ ಮತ್ತು ಶಿಕ್ಷಕರ ಸಮಾಲೋಚನ ಸಭೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪಾಲಕರ ಮತ್ತು ಶಿಕ್ಷಕರ ಸಮಾಲೋಚನ ಸಭೆಯು ನಡೆಯಿತು.

ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊಜೆಕ್ಟ್ ರಿಸರ್ಚ ಸೈಂಟಿಸ್ಟ್‌ಗಳಾದ ಅರುಣ ಕುಮಾರ್ ಎಸ್. ಮತ್ತು ನ್ಯುಟ್ರಿಶಿಯನ್ ಪ್ರೊಜೆಕ್ಟ್ ಟೆಕ್ನಿಕಲ್ ಸಪೋರ್ಟ್ ಗಳಾದ ಅಶ್ವಿನಿ ಪೈ.ಕೆ ಮತ್ತು ಸೈಕಾಲಜಿ ಪ್ರೊಜೆಕ್ಟ್ ಟೆಕ್ನಿಕಲ್ ಸಪೋರ್ಟ್‌ಗಳಾದ ರುತುಜಾ ಎಸ್. ರಾವ್ ಅವರು ಮಕ್ಕಳ ಆರೋಗ್ಯದ ಕಾಳಜಿಯ ಬಗ್ಗೆ ವಿಚಾರಗಳನ್ನು ಪೋಷಕರಿಗೆ ತಿಳಿಸುತ್ತಾ ಮಕ್ಕಳು ತಿನ್ನುವ ಪದಾರ್ಥಗಳು ಆರೋಗ್ಯಪೂರ್ಣವಾಗಿರುವಂತೆ ಗಮನಿಸುವುದು ಅತ್ಯವಶ್ಯ. ಮಾದಕಪದಾರ್ಥಗಳು ಎಲ್ಲಿಂದ ಹೇಗೆ ಮಕ್ಕಳ ಕೈಗೆಟಕುವುದೆಂದು ಹೇಳಲಸಾಧ್ಯವಾದ್ದರಿಂದ ಹೊರಗಿನ ತಿಂಡಿ, ತಿನಿಸು, ಪಾನೀಯಗಳನ್ನು ನಿರಂತರ ಸೇವಿಸದಂತೆ ಜಾಗ್ರತೆ ವಹಿಸುವುದು ಅತ್ಯಗತ್ಯ.

ಮಕ್ಕಳನ್ನು ಖಾಲಿಹೊಟ್ಟೆಯಲ್ಲಿ ಶಾಲೆಗೆ ಕಳುಹಿಸಬಾರದು. ಸದಾ ಮಕ್ಕಳು ಲವಲವಿಕೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ನಡೆದ ಘಟನೆಗಳನ್ನು ಮಕ್ಕಳು ತಂದೆತಾಯಿಯರ ಜೊತೆ ಪ್ರತಿನಿತ್ಯ ಹೇಳಿಕೊಳ್ಳುವಂತೆ ಸಮಯ ನೀಡಬೇಕು. ಎಂದು ತಿಳಿಹೇಳಿದರು.

ಶ್ರೀ ಸಿದ್ಧಿ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಶರಣ ಕುಮಾರ ಪೋಷಕರ ಅಹವಾಲುಗಳಿಗೆ ಸ್ಪಂದಿಸಿ, ಅವರಿಗೆ ಉತ್ತರಗಳನ್ನು ನೀಡಿ ಪೋಷಕರ ಬೆಂಬಲವೇ ನಮ್ಮೀ ಸಂಸ್ಥೆಯ ಜೀವಾಳವಾಗಿದೆ. ವಿದ್ಯಾರ್ಥಿಗಳು ದೇವರ ಅದ್ಭುತವಾದ ಸೃಷ್ಟಿ. ಅವರನ್ನು ಸಾಮಾಜಿಕ ಪಿಡುಗುಗಳಿಂದ ದೂರವಿರಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ವೇದಿಕೆಯಲ್ಲಿ ಡಾ. ಸುಬೇಂದು ಜಾನ, ಶಾಲೆಯ ಆಡಳಿತಾಧಿಕಾರಿಗಳಾದ ವೀಣಾ ರಶ್ಮಿ ಎಂ., ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಪೋಷಕ- ಶಿಕ್ಷಕ – ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕರಾದ ಗಣೇಶ ದೇವಾಡಿಗರು ನಿರೂಪಿಸಿ, ವಂದಿಸಿದರು.

Exit mobile version