Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಹೇರಿಕುದ್ರು ರಾ.ಹೆ ಬದಿಯ ಮರಕ್ಕೆ ಡಿಕ್ಕಿಯಾಗಿ ಬಿದ್ದ ಕಾರು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ರಾ. ಹೆ 66ರ ಹೇರಿಕುದ್ರುವಿನ ಮೇಲ್ಪತುವೆಯ ತಿರುವಿನಲ್ಲಿ ಕಾರೊಂದು ಉರುಳಿ ಬಿದ್ದ ಘಟನೆ ಬುಧವಾರ ಬೆಳಗ್ಗಿನ ಜಾವ ಸಂಭವಿಸಿದೆ. ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಂಗೊಳ್ಳಿಯಿಂದ ಮಲ್ಪೆ ಕಡೆಗೆ ಗಂಗೊಳ್ಳಿಯ ನಿವಾಸಿ ಮೊಹಮ್ಮದ್ ಸಾದ್ (31) ಎಂಬುವರು ಚಲಾಯಿಸುತ್ತಿದ್ದ ಕಾರು ಹೇರಿಕುದ್ರುವಿನ ಅಂಡರ್‌ಪಾಸ್ ಬಳಿಯ ಬೊಬ್ಬರ್ಯ ದೈವಸ್ಥಾನದ ಎದುರಿನ ಅಪಾಯಕಾರಿ ತಿರುವನ್ನು ಅರಿಯದ ಕಾರಣ, ಕಾರು ನಿಯಂತ್ರಣ ತಪ್ಪಿ, ಕೆಳಕ್ಕೆ ಪಲ್ಟಿಯಾಗಿ ಬಿದ್ದಿದೆ. ಪಲ್ಟಿಯಾಗುತ್ತ ಸರ್ವಿಸ್ ರಸ್ತೆಯೂ ದಾಟಿ ಮರವೊಂದಕ್ಕೆ ತಾಗಿ ನಿಂತಿದೆ. ಇಲ್ಲದಿದ್ದರೆ ಸಮೀಪದಲ್ಲಿಯೇ ಇದ್ದ ವಾರಾಹಿ ನದಿಗೆ ಪಲ್ಟಿಯಾಗಿ ಬೀಳುವ ಅಪಾಯವೂ ಇತ್ತು.

ಅದೃಷ್ಟವಶಾತ್ ಕಾರು ಚಾಲಕ ಮೊಹಮ್ಮದ್ ಸಾದ್ ಅವರು ಸಣ್ಣ ಪುಟ್ಟ ಗಾಯಗೊಂಡು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಕಾರು ಸಂಪೂರ್ಣ ಜಖಂಗೊಂಡಿದೆ.

ಕುಂದಾಪುರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ

Exit mobile version