ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರಿನ ಸೇವಾ ಸಂಗಮ ಶಿಶು ಮಂದಿರ, ಕುಂದಾಪುರ ಸೇವಾ ಸಂಗಮ ಶಿಶುಮಂದಿರದ ಟ್ರಸ್ಟ್ ವತಿಯಿಂದ 2025-26ನೇ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡ ಪಾಲಕರಿಗೆ ಟ್ರಸ್ಟಿನ ಅಧ್ಯಕ್ಷರಾದ ಸುಬ್ರಮಣ್ಯ ಹೊಳ್ಳ ಕುಂದಾಪುರ ಅವರು ಭಾರತೀಯ ಸಂಸ್ಕೃತಿ-ಸಂಸ್ಕಾರ ಹಾಗೂ ಜಲ ಸಂರಕ್ಷಣೆಯ ಬಗ್ಗೆ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದ ಬಾಂಧವ್ಯದ ಕುರಿತಾಗಿ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟು ಈ ಮೇಲಿನ ಮಾತನ್ನು ಹೇಳಿದರು.

ಕಾರ್ಯಾಗಾರದ ಸಭಾಧ್ಯಕ್ಷತೆ ವಹಿಸಿದ್ದ ಬೈಂದೂರು ಸೇವಾ ಸಂಘದ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ ಅವರು ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಗ್ರಾಮೀಣ ಭಾಗವಾದ ಬೈಂದೂರಿನಲ್ಲಿ ಸೇವಾ ಸಂಗಮ ಶಿಶು ಮಂದಿರದ ಕಾರ್ಯವೈಖರಿ ಮತ್ತು ಈ ಶಿಶು ಮಂದಿರ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಂಸ್ಕೃತಿ-ಸಂಸ್ಕಾರದೊಂದಿಗೆ ಮುನ್ನಡೆಯಲು ಸಹಕರಿಸುತ್ತಿರುವ ಎಲ್ಲ ಮಾತೆಯರಿಗೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿಶುಮಂದಿರದ ಪುಟಾಣಿಗಳಿಗೆ ನೀಡಲಾದ ಆಟೋಪಕರಣವನ್ನು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಸೇವಾ ಸಂಗಮದ ವ್ಯವಸ್ಥಾಪಕ ದಿನೇಶ್ ಹಾಗೂ ಉಪಾಧ್ಯಕ್ಷ ರವೀಂದ್ರ ಶಾನುಭಾಗ್ ಹಾಗೂ ಸುಧಾಕರ ಪಿ. ಬೈಂದೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಆಶಾ ದಿನೇಶ್ ನಿರೂಪಿಸಿ, ಶೋಭಾ ಸ್ವಾಗತಿಸಿ, ಪೂಜಾ ಧನ್ಯವಾದ ಗೈದರು.