Site icon Kundapra.com ಕುಂದಾಪ್ರ ಡಾಟ್ ಕಾಂ

ಬಾರ್ಕೂರು ದೇಗುಲದಲ್ಲಿ ಅಂದದ ಕೈಬರಹ ಮತ್ತು ಪ್ರಬಂಧ ಸ್ಪರ್ಧೆ- ʼಅಕ್ಷರ ಸಿರಿʼ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಸಿಕ ಸಭೆಯಲ್ಲಿ ಯುವ ವೇದಿಕೆ ಮತ್ತು ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ದೇವಸ್ಥಾನದ ಕೂಡುಕಟ್ಟಿಗೆ ಸೇರಿದ 5ನೇ ತರಗತಿಯಿಂದ ಪದವಿಯವರೆಗೆ ಮೂರು ವಿಭಾಗದಲ್ಲಿ ಅಂದದ ಕೈಬರಹ ಹಾಗೂ ಪ್ರಬಂಧ ಸ್ಪರ್ಧೆ “ಅಕ್ಷರ ಸಿರಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸ್ಪರ್ಧೆಯಲ್ಲಿ ಒಟ್ಟು 23 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಹುಮಾನ ವಿಜೇತರಾದ ಪ್ರಥಮ ವಿಭಾಗದಲ್ಲಿ ಶ್ವೇತಾಂಶ್ ಚೇರ್ಕಾಡಿ, ನಿರೀಕ್ಷಾ ಶೆಟ್ಟಿಗಾರ್, ಕಿಶನ್ ಸಾಸ್ತಾನ. ದ್ವಿತೀಯ ವಿಭಾಗದಲ್ಲಿ ಆರಾಧ್ಯ ಶೆಟ್ಟಿಗಾರ ನೀಲಾವರ, ಹರ್ಷಿತಾ ಬ್ರಹ್ಮಾವರ, ಐಶ್ವರ್ಯ ಜಪ್ತಿ, ತೃತೀಯ ವಿಭಾಗದಲ್ಲಿ ಧನುಶ್ರೀ ಎಡಬೆಟ್ಟು, ಸ್ಮಿತಾ ಕೊಪ್ಪ, ಸಂಜನಾ ರಂಗನಕೇರಿ ಮತ್ತು ಸಮಾಧಾನಕರ ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ದೇಗುಲದಲ್ಲಿ 234ನೇ ಮಾಸಿಕ ಸತ್ಯನಾರಾಯಣ ಪೂಜೆ, ಶತರುದ್ರಾಭಿಷೇಕ, ಮೂಡು ಗಣಪತಿ, ಪರಿವಾರ ದೈವಗಳಿಗೆ ವಿಶೇಷ ಪೂಜೆಯನ್ನು ಸೇವಾ ಕರ್ತರಾದ ಬಾರ್ಕೂರು ರಂಗನಕೇರಿ ಯಶೋಧ ಮತ್ತು ಶ್ರೀನಿವಾಸ ಶೆಟ್ಟಿಗಾರ, ಸೇವೆಯಿಂದ ನಿವೃತ್ತರಾದ ಡಾ. ಜಯರಾಮ್ ಶೆಟ್ಟಿಗಾರ್ ಸಂತೆಕಟ್ಟೆ, ಶಶಿಧರ್ ಶೆಟ್ಟಿಗಾರ್ ಬಾರಕೂರು, ಶೋಭಾ ಅರುಣ ಶೆಟ್ಟಿಗಾರ್ ಕೆಳಾರ್ಕಳಬೆಟ್ಟು ಅವರಿಗೆ ಶ್ರೀದೇವರ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇಗುಲದ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ್ ವಹಿಸಿದ್ದರು.

ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿಗಾರ್ ಸಂತೆಕಟ್ಟೆ, ಸಂಘಟನಾ ಸಮಿತಿ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್ ಸಂತೆಕಟ್ಟೆ, ಗುರಿಕಾರರಾದ ಶ್ರೀನಿವಾಸ ಶೆಟ್ಟಿಗಾರ ಕೊಳಂಬೆ, ಸಹ ಮೊಕ್ತೇಸರರಾದ ಜನಾರ್ಧನ್ ಶೆಟ್ಟಿಗಾರ್ ವಕ್ವಾಡಿ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಾವತಿ ಸದಾಶಿವ ಶೆಟ್ಟಿಗಾರ, ಯುವ ವೇದಿಕೆ ಅಧ್ಯಕ್ಷ ಸಂಜೀವ ಶೆಟ್ಟಿಗಾರ ಸಾಸ್ತಾನ, ಕಾರ್ಯದರ್ಶಿ ಜನಾರ್ಧನ್ ಶೆಟ್ಟಿಗಾರ್ ಚೇರ್ಕಾಡಿ. ಶ್ರೀ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ/ ಶೆಟ್ಟಿಗಾರ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸುಧಾಕರ ವಕ್ವಾಡಿ ಉಪಸ್ಥಿತರಿದ್ದರು.

ಯುವ ವೇದಿಕೆ ಅಧ್ಯಕ್ಷ ಸಂಜೀವ್ ಶೆಟ್ಟಿಗಾರ ಸ್ಪರ್ಧಾ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಲತಾ ಪ್ರವೀಣ್ ಶೆಟ್ಟಿಗಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.

ಟ್ರಸ್ಟ್ ಕಾರ್ಯದರ್ಶಿ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಉಡುಪಿ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ಶೆಟ್ಟಿಗಾರ್ ಸಾಸ್ತಾನ ಸ್ವಾಗತಿಸಿದರು. ಚಂದ್ರಶೇಖರ್ ಶೆಟ್ಟಿಗಾರ್ ಹೊಸಾಳ ಬಾರ್ಕೂರು ಅವರು ಆಯ-ವ್ಯಯ ಮಂಡಿಸಿದರು. ಕಾರ್ಯದರ್ಶಿ ಜನಾರ್ದನ್ ಶೆಟ್ಟಿಗಾರ್ ವರದಿ ವಾಚಿಸಿ, ವಂದಿಸಿದರು.

Exit mobile version