Site icon Kundapra.com ಕುಂದಾಪ್ರ ಡಾಟ್ ಕಾಂ

ವೈಜ್ಞಾನಿಕ ಮಾದರಿ ಸಂರಚನೆಯ ಸ್ಪರ್ಧೆಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
 ಶಾರದಾ ವಿದ್ಯಾಲಯ ಕೊಡೈಲ್‌ ಬೈಲ್ ಮಂಗಳೂರು ಇಲ್ಲಿ ನಡೆದ ವೈಜ್ಞಾನಿಕ ಮಾದರಿ ಸಂರಚನೆಯ ಸ್ಪರ್ಧೆಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳು ಸ್ವತಃ ತಮ್ಮ ಜ್ಞಾನದಿಂದ ವಿಜ್ಞಾನದ ಮಾದರಿಗಳನ್ನು ನಿರ್ಮಿಸಿ, ಹೊಸ ಆವಿಷ್ಕಾರದ ಪ್ರಜ್ಞೆಯನ್ನು ಅವರಲ್ಲಿ ಅರಳಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದ್ದರು. 

ಜ್ಯೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ನೀರಿನ ತೇವಾಂಶವನ್ನು ಗುರುತಿಸುವ ಮಾದರಿಯನ್ನು ತಯಾರಿಸಿದ ಕೆ. ಪೃಥುಲ್ ಮತ್ತು ಮೊಹಮ್ಮದ್ ವಾಸಿಲ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ ನವೀನ ಕೃಷಿ ಮಾದರಿಯ ಪ್ರದರ್ಶನ ನಡೆಸಿದ ಚಿನ್ಮಯ್‌ ದೀಕ್ಷಿತ್ ಮತ್ತು ಅಮೋಘ ಎಮ್. ಎಸ್. ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ  ಈ ಸಾಧನೆಯನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರರು  ಪ್ರಶಂಸಿಸಿ, ಶುಭ ಹಾರೈಸಿದರು.

Exit mobile version