ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈ ವರ್ಷದ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ತುಂಬಾಡಿ ರಾಮಯ್ಯ ಅವರ “ಜಾಲ್ಗಿರಿ” ಕಾದಂಬರಿಗೆ ದೊರೆತಿದೆ.
ತಮ್ಮ ಆತ್ಮಕಥನ ‘ಮಣೆಗಾರ’ದ ಮೂಲಕ ಕನ್ನಡ ಓದುಗರಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿದ ತುಂಬಾಡಿಯವರ ಅನುಭವ ಪ್ರಪಂಚ ಬಹು ದೊಡ್ಡದು. ‘ಮಣೆಗಾರ’ ಇಂಗ್ಲಿಷ್ ಹಾಗೂ ಮಲಯಾಳಂ ಭಾಷೆಗೆ ಅನುವಾದಗೊಂಡಿದ್ದು, ನಾಟಕವಾಗಿಯೂ ಜನಪ್ರಿಯವಾಗಿದೆ. ‘ಮುತ್ತಿನ ಜೋಳ ‘ ಮಣೆಗಾರ ಕೃತಿಯ ಮುಂದುವರಿದ ಭಾಗ. ‘ಸ್ಪರ್ಶ’ ಮತ್ತು ‘ದಲಿತಕಾರಣ’ ಅವರ ಲೇಖನಗಳ ಸಂಗ್ರಹವಾದರೆ, ‘ಓದೋ ರಂಗ ‘ ಮೊದಲ ಕಾದಂಬರಿ.
ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದು ಮತ್ತು ಬೆಳ್ಳಿಯ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಆಗಸ್ಟ್ 13ರಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಸಾಹಿತ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

