Site icon Kundapra.com ಕುಂದಾಪ್ರ ಡಾಟ್ ಕಾಂ

ಕೇರಮ್ ಕ್ರೀಡೆ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ಅಧ್ಯಯನಕ್ಕೆ ಸಹಾಯಕ: ಶೋಭಾ ಎಮ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕ್ರೀಡೆಯೂ ಕೂಡ ಜೀವನಕ್ಕೆ ಅವಶ್ಯವಾದ ಒಂದು ಪಾಠ. ಭಾರತೀಯ ಕ್ರೀಡೆಗಳು ಮಕ್ಕಳ ದೈಹಿಕ ಬೆಳವಣಿಗೆಗೆ ಮಾತ್ರ ಕಾರಣವಾಗದೇ ಬೌದ್ಧಿಕ ಕ್ರಿಯಾಶೀಲತೆಗೂ ಕಾರಣವಾಗುವುವು ಎಂದು ಸುಳ್ಯದ ಸಂಪಾಜೆ ಮಾರುತಿ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲರಾದ ಶೋಭಾ ಎಮ್. ಹೇಳಿದರು.

ಅವರು ಸಿಐಎಸ್‌ಸಿಇ ಗೇಮ್ಸ್ ಮತ್ತು ಸ್ಪೋರ್ಟ್ಸ್- 2025ರ ಅಂಗವಾಗಿ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಬುಧವಾರದಂದು ನಡೆದ ಪ್ರಾದೇಶಿಕ ಮಟ್ಟದ ಕೇರಮ್ ಟೂರ್ನಮೆಂಟ್ ಸ್ಪರ್ಧೆಯ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

https://www.youtube.com/live/d55f7I4Tvr8?si=ZlLJVkQqanJl8Ltg .

ಕೇರಮ್ ಆಟದಲ್ಲಿ ಎದುರಾಳಿಯನ್ನು ಎದುರಿಸುವಾಗ ಅವನ ದೌರ್ಬಲ್ಯವನ್ನು ಅರಿತು ಅದರಂತೆ ಆಡಬೇಕಾಗುತ್ತದೆ. ಇದರಿಂದ ಜೀವನದಲ್ಲಿ ಎದುರಾಳಿಯನ್ನು ಮಣಿಸುವ ಬುದ್ಧಿವಂತಿಕೆಯನ್ನೂ ತಿಳಿಸಿಕೊಡುತ್ತದೆ. ಕೆಲವು ಬಾರಿ ಲೆಕ್ಕಾಚಾರದ ವಿಷಯಗಳು ಅತ್ಯವಶ್ಯವಾಗಿದ್ದು, ಗಣಿತದ ವಿಚಾರಗಳ ಅಧ್ಯಯನವಾದಂತಾಗುತ್ತದೆ. ಎನ್ನುತ್ತಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವರನ್ನು ಹುರುದುಂಬಿಸಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡಿ, ಕೇರಮ್ ಜೀವನಕ್ಕೆ ಪಾಠವಾಗಿದ್ದು, ಶಾಲೆಗೆ ಸಿಕ್ಕ ಅವಕಾಶವನ್ನು ಎಲ್ಲಾ ಸಿಬ್ಬಂದಿ ವರ್ಗವೂ ಒಗ್ಗಟ್ಟಿನಿಂದ ಜವಾಬ್ದಾರಿಕೆಯಿಂದ ನಡೆಸಿದ್ದೇವೆಂಬುದು ನಮ್ಮ ಹೆಮ್ಮೆ ಎಂದರು.

ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳೂ, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ರಿಜಿಸ್ಟರ್ ಆದ ಡಾ. ಎನ್. ಪಿ. ನಾರಾಯಣ ಶೆಟ್ಟಿ ಅವರು ಶಾಲೆಯ ಕೆಲಸವನ್ನು ಅಚ್ಚುಕಟ್ಟಾಗಿ ನಡೆಸಿದ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿ ಮಾತನಾಡಿ, ಐಸಿಎಸ್‌ಸಿ ಪಠ್ಯಕ್ರಮದ ಶಾಲೆಗಳಲ್ಲಿ ಓದುವಿಕೆಗಷ್ಟೇ ಆದ್ಯತೆ ಎಂಬ ಮಾತು ಇಂದು ಹುಸಿಯಾಯಿತು. ಈಗ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಪಠ್ಯಕ್ರಮದ ಶಾಲೆಗಳು ನಿರಂತರ ಪರಿಶ್ರಮಪಡುತ್ತಿವೆ ಎಂಬ ವಿಷಯ ಲೋಕದ ಅರಿವೆಗೆ ಬರುವಂತಾಯಿತು. ಎಂದರು.

14 ವರ್ಷದೊಳಗಿನ ವಯೋಮಿತಿಯ ಹುಡುಗರ ಕೇರಮ್ ಸ್ಪರ್ಧೆಗಳಲ್ಲಿಸಿಂಗಲ್ಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಪ್ರಜ್ವಲ್ ಎಸ್, ಕೆಎಜಿಒ ಇ ವಲಯ, ಡಬಲ್ಸ್ ನಲ್ಲಿ ಕರಣ್ ಆರ್ ನಾಯ್ಕ್ ಮತ್ತು ನೂಥನ್ ಸ್ವರೂಪ್ ಎನ್ ಕೆಎಜಿಒ ಎಫ಼್ ವಲಯ, ಆಯ್ಕೆಯಾದರು. ಹುಡುಗಿಯರ ಸಿಂಗಲ್ಸ್‌ನಲ್ಲಿ ಎಮ್ ಮಿಲನ ಕೆಎಜಿಒ ಜಿ ವಲಯ, ಡಬಲ್ಸ್‌ನಲ್ಲಿ ಆರಾಧ್ಯ ಎಮ್ ಮತ್ತು ದೀಕ್ಷಿತ ಕೆಎಜಿಒ ಎಫ಼್ ಆಯ್ಕೆಯಾಗಿದ್ದಾರೆ.

17 ವರ್ಷದೊಳಗಿನ ವಯೋಮಿತಿಯ ಹುಡುಗರ ಕೇರಮ್ ಸ್ಪರ್ಧೆಗಳಲ್ಲಿಸಿಂಗಲ್ಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ನಿಶಾಂತ್  ಕೆಎಜಿಒ ಜಿ ವಲಯ, ಡಬಲ್ಸ್‌ನಲ್ಲಿ ಎಸ್ ಶ್ರೀನಿಕೇತ್ ಮತ್ತು ಸಚಿನ್ ಎಸ್ ಎನ್ ಕೆಎಜಿಒ ಬಿ ವಲಯ, ಆಯ್ಕೆಯಾದರು.  ಹುಡುಗಿಯರ ಸಿಂಗಲ್ಸ್‌ನಲ್ಲಿ ವಿಶ್ಮಿತ ಪಿ ಕೆಎಜಿಒ ಇ ವಲಯ, ಡಬಲ್ಸ್‌ನಲ್ಲಿ ಪ್ರಾಚಿ ಶಿಲ್ಪ ಪ್ರಸಾದ್ ಮತ್ತು ಸಹಿತ ಪಿ ಕೆಎಜಿಒ ಇ ಆಯ್ಕೆಯಾಗಿದ್ದಾರೆ.

19 ವರ್ಷದೊಳಗಿನ ವಯೋಮಿತಿಯ ಹುಡುಗರ ಕೇರಮ್ ಸ್ಪರ್ಧೆಗಳಲ್ಲಿಸಿಂಗಲ್ಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಅಭಿಷೇಕ್ ವಿ ಕೆಎಜಿಒ ಜಿ ವಲಯ, ಡಬಲ್ಸ್‌ನಲ್ಲಿ ಯಶ್ವಂತ್ ಎಂ ಮತ್ತು ದ್ರುಪದ ಬಿ ಎಸ್ ಕೆಎಜಿಒ ಇ ವಲಯ, ಆಯ್ಕೆಯಾದರು.  ಹುಡುಗಿಯರ ಸಿಂಗಲ್ಸ್‌ನಲ್ಲಿ ಹೆಚ್ ಎಂ ಜಾಹ್ನವಿ  ಕೆಎಜಿಒ ಬಿ  ವಲಯ, ಡಬಲ್ಸ್‌ನಲ್ಲಿ ಕಾಂಚನ ಟಿ ಮತ್ತು ಕಾವ್ಯ ಟಿ ಕೆಎಜಿಒ ಹೆಚ್ ಆಯ್ಕೆಯಾಗಿದ್ದಾರೆ. ವಿವಿಧ ಶಾಲೆಗಳಿಂದ ಬಂದ ಅಧ್ಯಾಪಕರು ಮತ್ತು

ವಿದ್ಯಾರ್ಥಿಗಳು ಸಿದ್ಧಿವಿನಾಯಕ ವಸತಿಶಾಲೆ, ತಮಗೆ ನೀಡಿದ ಸತ್ಕಾರವನ್ನು ಮನಸಾರೆ ಅಭಿನಂದಿಸಿದರು.

ವೇದಿಕೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ ಪ್ರಫುಲ್, ಸನತ್ ಕುಮಾರ್, ದೀಕ್ಷಿತ್ ಡಿ. ಎ, ಶರಣ್, ಖುಷಿ ಬಂಗೇರ, ಕೌಸಲ್ಯಾ ಬಂಗೇರ, ಮೋಹಿತ್ ಎಸ್ ಎ, ಮೋಹಿತ್ ಬೆಂಗಳೂರು, ಸುಮನ, ರಾಹುಲ್, ಸ್ಟೀವನ್, ಸುಮಂತ್, ಆನಂದ್, ಭೂಮಿಕಾ ಶೆಟ್ಟಿ, ಶಾಲಾ ಆಡಳಿತಾಧಿಕಾರಿ ಶ್ರೀಮತಿ ವೀಣಾ ರಶ್ಮಿ ಎಮ್., ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಮತ್ತು ವಿವಿಧ ಶಾಲೆಗಳ ಅಧ್ಯಾಪಕರು, ಸ್ಪರ್ಧಾರ್ಥಿಗಳು, ಶಾಲಾ ಶಿಕ್ಷಕ ಶಿಕ್ಷಕೇತರವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿ ದಯಾಸಾಗರ ನಿರ್ವಹಿಸಿ, ವಿದ್ಯಾರ್ಥಿನಿ ಪ್ರಗತಿ ಎನ್. ಜಿ. ಸ್ವಾಗತಿಸಿ, ವಿದ್ಯಾರ್ಥಿ ಉತ್ತಮ್ ಬಿ. ಧನ್ಯವಾದವನ್ನು ಸಮರ್ಪಿಸಿದರು.

Exit mobile version