ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಶ್ರೀ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದ ಅಭಿವೃದ್ಧಿ ಕಾರ್ಯದ ಅಂಗವಾಗಿ ವಾಸ್ತು ತಜ್ಞರ ಕಟ್ಟಿ ಮುಖೇನ ಸಿದ್ದಪಡಿಸಿರುವ ನೀಲ ನಾಕ ನಕಾಶೆಯನ್ನು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅಭಿವೃದ್ಧಿ ಸಮಿತಿ ವಿಜ್ಞಾಪನಾ ಪತ್ರವನ್ನು ಅನಾವರಣಗೊಳಿಸಿದರು.

ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಶೇಖರ್ ಹೆಬ್ಬಾರ್ ಮಾತನಾಡಿ, ಅರಬ್ಬಿ ಸಮುದ್ರ ಮತ್ತು ಸೌಪರ್ಣಿಕಾ ನದಿ ಮಧ್ಯದಲ್ಲಿ, ಉದ್ಭವಿಸಿರುವ ಅತ್ಯಂತ ಪುರಾತನ ಇತಿಹಾಸವನ್ನು ಹೊಂದಿರುವಂತಹ ಜಿಲ್ಲೆಯ ಸುಪ್ರಸಿದ್ದ ದೇವಾಲ ಯವು ಜೀರ್ಣಾವಸ್ಥೆಯಲ್ಲಿದೆ. ದೇವಾಲಯವನ್ನು ಜೀರ್ಣೋದ್ದಾರ ಮಾಡುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ರೂಪಿಸಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ದೇವಾಲಯದ ಅಭಿವೃದ್ಧಿ ಸಮಿತಿ ಕೂಡ ರಚಿಸಲಾಗಿದೆ.
ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ದೇವಾಲಯವನ್ನು ಆಲೋಚನೆ ಹೊಂದಲಾಗಿದೆ. ಅತಿ ಶೀಘ್ರದಲ್ಲೆ ಜೀರ್ಣೋದ್ದಾರ ಕಾರ್ಯಕ್ಕೆ ಮುಂದಾಗಲಿದ್ದೇವೆ ಎಂದು ಹೇಳಿದರು.
ಮಹಾರಾಜ ಸ್ವಾಮಿ ಶ್ರೀ ವರಾಹ ದೇವಾಲಯ ಇತಿಹಾಸಕಾರರ ಅಭಿಪ್ರಾಯದಂತೆ ದೇವ ಮೂರ್ತಿಗಳು ಬಹು ಪುರಾತನವಾಗಿದ್ದು, ಸುಮಾರು 2 ಸಾವಿರ ವರ್ಷಗಳ ಇತಿಹಾಸವಿರುವ ಕಲಿಯುಗದ ಮಧ್ಯ ಕಾಲದ ದೇವಳ ಆಗಿದೆ ಎಂದು ಹೇಳಲಾಗುತ್ತಿದೆ. ಗರ್ಭಗುಡಿ, ಎಡನಾಳಿ, ತೀರ್ಥ ಮಂಟಪ, ಸುತ್ತು ಪೌಳಿ, ಸ್ವಾಗತ ಮಂಟಪ, ರಾಜಗೋಪುರ, ಕ್ಷೇತ್ರಪಾಲ ಗುಡಿ, ನೂತನ ಧ್ವಜಸ್ತಂಭ, ನೈವೇದ್ಯ ಕೋಣೆ, ದಾಸೋಹ ಭವನ, ಅಡುಗೆ ಕೋಣೆ, ಸಭಾಭವನ ಹಾಗೂ ಶ್ರೀ ಗಂಗಾಧರ ಸ್ವಾಮಿ ದೇವಾಲಯ ನಿರ್ಮಾಣ ಕಾರ್ಯಗಳು ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.