Kundapra.com ಕುಂದಾಪ್ರ ಡಾಟ್ ಕಾಂ

ಮೂಡ್ಲಕಟ್ಟೆ: ಸಿ.ಎ ಮತ್ತು ಸಿ.ಎಸ್ ಕೋರ್ಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ 

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಮೂಡ್ಲಕಟ್ಟೆ ಐಎಂಜೆ ಪದವಿ ಕಾಲೇಜು ಇದರ ಕಾಮರ್ಸ್ ಮತ್ತು ವ್ಯವಹಾರ ಆಡಳಿತ ಸಂಘದ ಆಶ್ರಯದಲ್ಲಿ 2025-26ನೇ ಸಾಲಿನಲ್ಲಿ ಕಾಲೇಜಿಗೆ ಸೇರ್ಪಡೆಗೊಂಡ ಪ್ರಥಮ ವರ್ಷದ ಪದವಿಯ  ಸಿ.ಎ ಮತ್ತು ಸಿ.ಎಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿ.ಎ ಪಾಂಡುರಂಗ ನಾಯಕ್ ಅವರು ಸಿ.ಎ ಮತ್ತು ಸಿ.ಎಸ್ ಕೋರ್ಸ್ ನ ಸಂಪೂರ್ಣ ಮಾಹಿತಿಯನ್ನು ವಿವರಿಸಿ ಮಾತನಾಡಿ, ಸಮಾಜದಲ್ಲಿ ಉತ್ತಮ ಸ್ತರದಲ್ಲಿರುವ ಸಿಎ ಮತ್ತು ಸಿ.ಎಸ್ ಕೋರ್ಸ್ ಅನ್ನು  ನಿರಂತರ ಪ್ರಯತ್ನ, ಛಲ ಮತ್ತು ಏಕಾಗ್ರತೆಯಿಂದ ಯಾವ ವಿದ್ಯಾರ್ಥಿಯು ಸಫಲತೆಯನ್ನು ಸಾಧಿಸಬಹುದು ಎಂದರು. ಜಿಲ್ಲೆಯ ನುರಿತ ಸಿ.ಎ, ಸಿ.ಎಸ್ ತರಬೇತುದಾರರಿಂದ ಕಾಲೇಜಿನಲ್ಲಿಯೇ  ಕೋಚಿಂಗ್ ವ್ಯವಸ್ಥೆಯನ್ನು ಒದಗಿಸುತ್ತಿರುವ  ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಗಿಸಿದರು. ಕೋರ್ಸ್ ನ ವಿವಿಧ ಹಂತಗಳು, ವಿಷಯ, ಪರೀಕ್ಷಾ ತಯಾರಿ, ಮಾನಸಿಕ ಸಿದ್ಧತೆ ಹೀಗೆ ಹಲವು ವಿಷಯಗಳನ್ನು ಹಂಚಿಕೊಂಡರು. 

ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಉಪ ಪ್ರಾಂಶುಪಾಲರು ಹಾಗೂ ಐಕ್ಯೂಎಸಿ ಸಂಯೋಜಕರಾದ ಜಯಶೀಲ್ ಕುಮಾರ್, ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ಮುಖ್ಯಸ್ಥರು ಮತ್ತು ಸಂಯೋಜಕರಾದ  ಅರ್ಚನಾ ಗದ್ದೆ ಉಪಸ್ಥಿತರಿದ್ದರು.

ತೃತೀಯ ವರ್ಷದ ಬಿ. ಕಾಂ. ವಿದ್ಯಾರ್ಥಿನಿ ಆಲ್ಫಿದಾ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version