Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಖಾರ್ವಿಕೇರಿ ನಿವಾಸಿಗಳಿಗೆ ಹಕ್ಕುಪತ್ರದ ಖಾತರಿ: ನಿವಾಸಿಗಳಿಂದ ಶಾಸಕರಿಗೆ ಅಭಿನಂದನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಪುರಸಭಾ ವ್ಯಾಪ್ತಿಯ ಖಾರ್ವಿಕೇರಿಯ ಪರಿಸರದ ನಿವಾಸಿಗಳು ಹಲವು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ನಡೆಸಿದ ಹೋರಾಟಕ್ಕೆ   ಫಲ ದೊರೆತಿದ್ದು, ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಸತತ ಪ್ರಯತ್ನದ ಪುರಸಭಾ ವ್ಯಾಪ್ತಿಯಲ್ಲಿ ಹಕ್ಕು ಪತ್ರ ನೀಡಲು ಕಾನೂನಿನ ಅಭ್ಯಂತರ ಇಲ್ಲ ಎಂದು ಕಂದಾಯ ಆಯುಕ್ತರಿಂದ  ಉಡುಪಿ ಜಿಲ್ಲಾಧಿಕಾರಿ ಅವರಿಗೆ ಲಿಖಿತ ಆದೇಶ ದೊರೆತಿದೆ.

ಖಾರ್ವಿಕೇರಿ ಜನರ ಸಮಸ್ಯೆ ಬಗೆಹರಿಯಲು ಶ್ರಮಿಸಿದ ಶಾಸಕರಿಗೆ ನಿವಾಸಿಗಳು ಪುಷ್ಪಗುಚ್ಛ ನೀಡಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ  ಅಖಿಲ ಭಾರತ ಕೊಂಕಣ  ಮಹಾಜನ ಸಂಘದ ಅಧ್ಯಕ್ಷ ರವಿ ಟಿ.ನಾಯ್ಕ, ಜಿ. ಮಾಜಿ ಅಧ್ಯಕ್ಷ ಕೆ.ಬಿ. ಖಾರ್ವಿ, ಕೊಂಕಣ ಖಾರ್ವಿ ಸಮಾಜದ ಪ್ರಮುಖರಾದ ಉಮಾನಾಥ ಖಾರ್ವಿ, ಪ್ರಕಾಶ್ ಖಾರ್ವಿ, ಸಂದೀಪ ಖಾರ್ವಿ, ದಿನಕರ ಖಾರ್ವಿ, ರವಿ ಖಾರ್ವಿ, ಲಕ್ಷ್ಮಣ ಖಾರ್ವಿ, ರಾಜು ಖಾರ್ವಿ, ಶೇಖರ್ ಖಾರ್ವಿ, ರತ್ನಾಕರ್ ಖಾರ್ವಿ, ಸದಾನಂದ ಖಾರ್ವಿ,, ಸದಾನಂದ ಮದುಗುಡ್ಡೆ,, ರಾಘವೇಂದ್ರ ಖಾರ್ವಿ, ಅಮೃತ ಪಾಂಡೆ,,ಸಂದೀಪ ಎಸ್. ಎಸ್., ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Exit mobile version