ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಇಲ್ಲಿನ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ನ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಂದ ʼಇನ್‌ಕ್ಲೂಸಿವ್ ಗ್ರೋಥ್ʼ ಎಂಬ ವಿಷಯಾದರಿತ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮವು ಸಾಮಾಜಿಕ ಶಿಕ್ಷಣದ ಭಾಗವಾಗಿದ್ದು ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಮನೋಭಾವ ಹಾಗೂ ಸಾಮೂಹಿಕ ಪ್ರಗತಿಯ ಮಹತ್ವವನ್ನು ಅರಿವಿಗೆ ತರುವ ಉದ್ದೇಶವನ್ನು ಹೊಂದಿತ್ತು.

ಕಾರ್ಯಕ್ರಮದ ವಿಶೇಷ ಅಂಶವೆಂದರೆ ಪುಟಾಣಿಗಳ ಉಜ್ವಲ ಪ್ರದರ್ಶನಗಳು ಗೀತ ಗಾಯನ, ನಾಟಕ, ಭಾಷಣ ಮೊದಲಾದ ವಿವಿಧ ಕಲಾ ರೂಪಗಳ ಮೂಲಕ ಅವರು ತೋರಿದ ಪ್ರತಿಭೆ ಎಲ್ಲರ ಕಣ್ಮನಗಳನ್ನು ಸೆಳೆಯುದರೊಂದಿಗೆ ಮಕ್ಕಳು ದೇಶದ ಬಗ್ಗೆ ಉಳ್ಳ ತಮ್ಮ ಪ್ರೀತಿ ಹಾಗೂ ಗೌರವವನ್ನು ಕಲಾತ್ಮಕವಾಗಿ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕರಾದ ಶಮಿತಾ ರಾವ್ ಉಪಸ್ಥಿತರಿದ್ದು ಮಾತನಾಡಿ, “ಇಂತಹ ಕಾರ್ಯಕ್ರಮಗಳು ಮಕ್ಕಳು ಉತ್ತಮ ನಾಗರಿಕರಾಗುವ ದಿಕ್ಕಿನಲ್ಲಿ ಪ್ರೇರಣೆ ನೀಡುತ್ತವೆ. ದೇಶದ ಪ್ರಗತಿಗೆ ನಾವು ಹೇಗೆ ಕೊಡುಗೆ ನೀಡಬೇಕು ಎಂಬ ಅರಿವು ಅವರಿಗೆ ಈಗಲೇ ಮೂಡಬೇಕು “ಎನ್ನುತ್ತಾ ರಾಷ್ಟ್ರೀಯ ಚಿಹ್ನೆಗಳನ್ನು ಮಕ್ಕಳು ಗುರುತಿಸಿ ಉಚ್ಚರಿಸುವಂತೆ ಮಾಡಿ ಮಕ್ಕಳಲ್ಲಿ ದೇಶಭಿಮಾನ ಮೂಡಿಸುವ ಸಣ್ಣ ಪ್ರಯತ್ನ ಮಾಡಿದರು.
ಈ ಕಾರ್ಯಕ್ರಮವು ಮಕ್ಕಳಲ್ಲಿ ನೈತಿಕ ಮೌಲ್ಯಗಳ ಬಿತ್ತನೆ ಮಾಡುವುದಷ್ಟೇ ಅಲ್ಲದೆ ದೇಶ ಸೇವೆಯ ಪ್ರೇರಣೆಯನ್ನು ಗಂಭೀರವಾಗಿ ನೀಡಿದಂತಾಯಿತು.