Kundapra.com ಕುಂದಾಪ್ರ ಡಾಟ್ ಕಾಂ

ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಹೀಗೆ ಮಾಡಿ

ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ ಸ್ಕಿನ್ ಹೊಂದಿರುವವರೂ ಚಳಿಗಾಲದಲ್ಲಿ ಕಿರಿಕಿರಿ ಅನುಭವಿಸುತ್ತಾರೆ.

ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಆರೈಕೆ ಅಗತ್ಯ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಒಣ ಚರ್ಮದಿಂದ ಮುಕ್ತಿ ಹೊಂದಿ, ಚಳಿಗಾಲದಲ್ಲಿ ನೆಮ್ಮದಿಯಿಂದಿರಬಹುದು. (ಕುಂದಾಪ್ರ ಡಾಟ್ ಕಾಂ)

ಚಳಿಗಾಲದಲ್ಲಿ ಬಾದಾಮಿ ಎಣ್ಣೆ ಬಳಕೆ ಉತ್ತಮ. ರಾತ್ರಿ ಎಣ್ಣೆ ಹಚ್ಚಿ ಮಲಗಿದರೆ, ಬೆಳಿಗ್ಗೆ ಚರ್ಮ ಒಣಗುವುದಿಲ್ಲ. ಕಾಂತಿಯುತವಾಗಿರುತ್ತದೆ. ಸೋಪ್ ಬದಲು ಸಾಸಿವೆ ಎಣ್ಣೆಯನ್ನು ಬಳಸುವುದು ಒಳ್ಳೆಯದು. ಸ್ನಾನದ ನಂತರ ಮೃದು ಬಟ್ಟೆಯಲ್ಲಿ ಮೈ ಒರೆಸಿಕೊಳ್ಳಿ. ನಂತರ ಎಣ್ಣೆ ಅಥವ ಲೋಷನ್ ಹಚ್ಚಿಕೊಳ್ಳಿ. ಶೀತ ಎಂಬ ಕಾರಣಕ್ಕೆ ಅತೀ ಬಿಸಿ ನೀರನ್ನು ಬಳಸಬೇಡಿ. ಅತೀ ತಣ್ಣನೆಯ ನೀರನ್ನೂ ಕೂಡ ಬಳಸಬಾರದು.

Exit mobile version