ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಂಕರ ನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಪೂರ್ವ ಪ್ರಾಥಮಿಕ ವಿಭಾಗದ ಪುಟಾಣಿಗಳಿಗಾಗಿ ‘ಬಾಲ ರಾಧೆ ಬಾಲ ಗೋಪಾಲ ‘ಸ್ಪರ್ಧೆಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಮುಖ್ಯ ತೀರ್ಪುಗಾರರಾಗಿ ಆಗಮಿಸಿದ ಕಿಶೋರ್ ಕುಮಾರ್ ಆರೂರ್ ಅವರು ಉದ್ಘಾಟಿಸಿ ಮಾತನಾಡಿ “ಇಲ್ಲಿ ಎಲ್ಲ ಮಕ್ಕಳು ಬಾಲಗೋಪಾಲ ಬಾಲರಾಧೆಯರೇ, ಇದು ಸ್ಪರ್ಧೆ ಎನ್ನುವುದಕ್ಕಿಂತ ಇದು ನಮ್ಮೆಲ್ಲರ ಮನವನ್ನು ತಣಿಸುವ ಸುಂದರ ಕಾರ್ಯಕ್ರಮ” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥಾಪಕರು ಪುಟಾಣಿಗಳಿಗೆ ಶುಭ ಹಾರೈಸಿದರು. ಈ ಸ್ಪರ್ಧೆಗೆ ನ್ಯಾಯ ನಿರ್ಣಾಯಕರಾಗಿ ನೃತ್ಯ ಗುರುಗಳಾದ ಜಗದೀಶ್ ಬನ್ನಂಜೆ, ಹಿಂದುಸ್ತಾನಿ ಸಂಗೀತ ಪ್ರವೀಣರಾದ ಅಶ್ವತ್ ಐತಾಳ್‌ರು ಉಪಸ್ಥಿತರಿದ್ದರು.

ಈ ವಿಶೇಷ ಕಾರ್ಯಕ್ರಮದ ಉದ್ದೇಶ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಬೆಳೆಸುವುದು ಅವರ ಸೃಜನಶೀಲತೆ ಮತ್ತು ಆತ್ಮ ವಿಶ್ವಾಸವನ್ನುಉತ್ತೇಜಿಸುವುದಾಗಿತ್ತು.
ಪುಟಾಣಿಗಳು ಕಣ್ಮನ ತಣಿಸುವಂತೆ ಬಾಲಗೋಪಾಲ ಮತ್ತು ಬಾಲರಾಧೆಯರ ವೇಷ ಧಾರಣೆಯಲ್ಲಿ ಮಿಂಚಿ ಮಾಧುರ್ಯಮಯ ಧ್ವನಿ ಮತ್ತು ಕೃಷ್ಣ ಲೀಲೆಯ ನೃತ್ಯಗಳ ಮೂಲಕ ಎಲ್ಲರ ಮನಸ್ಸು ಗೆದ್ದರು. ಅವರ ಸಣ್ಣ ಸಣ್ಣ ಪಾದ ಚಲನೆಗಳು ನಗುಮುಖದ ಮುದ್ರೆಗಳು ಎಲ್ಲರನ್ನು ಆನಂದದ ಸಮುದ್ರದಲ್ಲಿ ತೇಲಿಸಿದವು.
ಕಾರ್ಯಕ್ರಮದಲ್ಲಿ ಪುಟಾಣಿಗಳು ಹೆಮ್ಮೆಯಿಂದ ಮಿಂಚಿದರೆ ಅದರ ಹಿಂದೆ ಪೋಷಕರ ಸೃಜನಾತ್ಮಕತೆ, ಯತ್ನ ಕಾಳಜಿಯು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕೊನೆಯಲ್ಲಿ ಬಾಲ ರಾಧೆ ಬಾಲಕೃಷ್ಣ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಎಲ್.ಕೆ.ಜಿ ವಿಭಾಗದ ಬಾಲಗೋಪಾಲ ಸ್ಪರ್ಧೆಯಲ್ಲಿ ಆಧ್ಯಾ. ಎಸ್. ಪ್ರಥಮ ಸ್ಥಾನವನ್ನು, ಸಂಕೀರ್ತನ್.ಎಂ. ದ್ವಿತೀಯ, ಅದ್ವಿತಿ ಎಸ್. ಶೆಟ್ಟಿ. ತೃತೀಯ ಸ್ಥಾನವನ್ನು, ಯು.ಕೆ.ಜಿ ವಿಭಾಗದ ಅಗಮ್ಯ ಶೆಟ್ಟಿ ಪ್ರಥಮ, ಮನುರಂಜನ್ ಎಸ್. ರಾವ್ ದ್ವಿತೀಯ, ಅದ್ವಿನ್. ಪಿ. ಶೆಟ್ಟಿ ತೃತೀಯ ಸ್ಥಾನವನ್ನು ಪಡೆದಿದ್ದು ಬಾಲರಾಧ ಸ್ಪರ್ಧೆಯಲ್ಲಿ ಎಲ್.ಕೆ.ಜಿ ವಿಭಾಗದಲ್ಲಿ ಅಶ್ವಿಕ ನಯನ ಶೆಟ್ಟಿ ಪ್ರಥಮ, ರಿತನ್ಯ ಆರ್ ಶೆಟ್ಟಿ ದ್ವಿತೀಯ, ಧನ್ವಿ ತೃತೀಯ ಸ್ಥಾನವನ್ನು ಯುಕೆಜಿ ವಿಭಾಗದ ಆಧ್ಯ. ಎಚ್. ಆರ್ ಪ್ರಥಮ, ಮನ್ವಿಕ.ಎಂ. ಶೇಟ್ ದ್ವಿತೀಯ ಸ್ಥಾನವನ್ನು, ತನ್ವಿ ಶೆಟ್ಟಿ ತೃತೀಯ ಸ್ಥಾನವನ್ನು ಪಡೆದುಕೊಂಡರು.
ಶಿಕ್ಷಕರು, ಪೋಷಕರು ಮತ್ತು ಪುಟಾಣಿಗಳ ಸಮ್ಮಿಲನದಲ್ಲಿ ಕಾರ್ಯಕ್ರಮ ಅದ್ದೂರಿ ಯಶಸ್ಸನ್ನು ಕಂಡಿತು. ಕಾರ್ಯಕ್ರಮವನ್ನು ವೈಶಾಲಿ. ಶೆಟ್ಟಿ ಸ್ವಾಗತಿಸಿ, ಅವಿನಾ ಅವರು ನಿರೂಪಿಸಿದರು.