Kundapra.com ಕುಂದಾಪ್ರ ಡಾಟ್ ಕಾಂ

ಹಿಂದೂ ಧರ್ಮದವರಿಗೆ ತಿಳಿದಿರಲೇಬೇಕಾದ್ದು. ನಿಮಗೆ ಗೊತ್ತಾ?

ಹಿಂದೂ ಧರ್ಮವು ಸದ್ಯ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿಯೇ ಅತ್ಯಂತ ಪ್ರಾಚೀನವಾದುದು. ಇದು ವಿಶ್ವದ ಮೂರನೇ ಅತಿ ದೊಡ್ಡ ಧರ್ಮ ಎಂದು ಪರಿಗಣಿಸಲ್ಪಡುತ್ತಿದೆ. ಇತರ ಧರ್ಮಗಳಂತೆ ಹಿಂದೂ ಧರ್ಮ ಯಾವುದೇ ವ್ಯಕ್ತಿಯ ಅಥವಾ ಧಾರ್ಮಿಕ ಸಂಪ್ರದಾಯದವನ್ನು ಆಧರಿಸಿದ ಹೆಸರಾಗಿರದೆ, ಒಂದು ಸಮುದಾಯದ ಹೆಸರಾಗಿದೆ. ಸಿಂಧೂ ನದಿ ಬಯಲಿನಲ್ಲಿ ವಾಸಿಸುವ ಜನಸಮುದಾಯಕ್ಕೆ ಸಿಂಧೂ ಎಂದು, ಅದು ಕ್ರಮೇಣ ಭಾಷಾ ಸ್ಥಿತ್ಯಂತರಗಳಿಂದಾಗಿ ಹಿಂದೂವಾಗಿದೆ ಎನ್ನಲಾಗಿದೆ. ಹಿಂದೂಧರ್ಮಕ್ಕೆ ಬೇರೆ ಧರ್ಮಗಳಿಗಿರುವಂತೆ ಸಂಸ್ಥಾಪಕರಿಲ್ಲ.

ಹಿಂದೂ ಧರ್ಮವನ್ನು ‘ಸನಾತನ ಧರ್ಮ’ವೆಂದೂ ಕರೆಯುತ್ತಾರೆ. ‘ಸನಾತನ’ ಎಂದರೆ ಎಂದೂ ಅಳಿಯದ, ಚಿರಂತನ, ನಿರಂತರವಾದ ಎಂದರ್ಥ. ಹಿಂದೂ ಧರ್ಮದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳಿದ್ದು, ಪ್ರತಿಯೊಬ್ಬ ಹಿಂದೂ ತನ್ನ ಬದುಕಿನಲ್ಲಿ ಈ ನಾಲ್ಕು ಪುರುಷಾರ್ಥಗಳ ಸಿದ್ಧಿಯನ್ನು ಪಡೆದಾಗ ಮಾತ್ರ ಆತನ ಬದುಕು ಸಾರ್ಥಕ್ಯಗೊಳ್ಳಲು ಸಾಧ್ಯ ಎಂದು ಧರ್ಮಗ್ರಂಥಗಳು ಹೇಳುತ್ತವೆ.

ಹಿಂದೂ ಜ್ಞಾನಪರಂಪರೆಯಲ್ಲಿ ಶ್ರುತಿ ಮತ್ತು ಸ್ಮೃತಿಯೆಂಬ ಎರಡು ಅಭ್ಯಾಸಗಳಿದ್ದು, ಶ್ರುತಿಯು ಕೇಳಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದ್ದರೆ, ಸ್ಮೃತಿಯು ಕೇಳಿದ್ದನ್ನು ದಾಖಲಿಸುವುದಾಗಿದೆ. ಹಿಂದೂ ಧರ್ಮವು ಧಾರ್ಮಿಕ, ದಾರ್ಶನಿಕ ಮತ್ತು ತಾತ್ವಿಕ ಸಿದ್ಧಾಂತಗಳಿಂದ ರೂಪುಗೊಂಡಿದ್ದು, ಇದರ ಮೂಲಸಿದ್ಧಾಂತ ಕರ್ಮಸಿದ್ಧಾಂತವಾಗಿದೆ. ಇದಲ್ಲದೆ, ಕರ್ತೃ-ಕಾರಣ ಸಂಬಂಧ, ಮರುಜನ್ಮದ ಕುರಿತು ನಂಬಿಕೆ ಮತ್ತು ಹುಟ್ಟು ಸಾವುಗಳೆಂಬ ಆದಿ ಅಂತ್ಯಗಳನ್ನು ಒಳಗೊಂಡಿರುವ ಜೀವನಚಕ್ರ ಮುಂತಾದವು ಕೂಡ ಇದರಲ್ಲಿ ಸೇರಿದೆ. ಈ ಹಿಂದೂ ಧರ್ಮದಲ್ಲಿ ಆಸ್ತಿಕರು, ಆಜ್ಞೇಯತಾವಾದಿಗಳು, ನಾಸ್ತಿಕರು ಎಂದು ಹಲವು ಗುಂಪಿಗೆ ಸೇರಿದವರನ್ನು ಗುರುತಿಸಬಹುದಾದರೂ ಈಗಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕರನ್ನು ಕಾಣಬಹುದಾಗಿದೆ. (ಕುಂದಾಪ್ರ ಡಾಟ್ ಕಾಂ)

ಹಿಂದೂ ಧರ್ಮ. ನಿಮಗೆಷ್ಟು ತಿಳಿದಿದೆ?

ವೇದಗಳು (4)
ಋಗ್ವೇದ,  ಯಜುರ್ವೇದ, ಸಾಮವೇದ,  ಅಥರ್ವವೇದ.

ರಾಶಿಗಳು (12)
ಮೇಷ,  ವೃಷಭ, ಮಿಥುನ, ಕರ್ಕ, ಸಿಂಹ,  ಕನ್ಯಾ,  ತುಲಾ, ವೃಶ್ಚಿಕ, ಧನು, ಮಕರ,  ಕುಂಭ,  ಮೀನ.

ಋತುಗಳು (6) ಮಾಸ (12)
ವಸಂತ (ಚೈತ್ರ-ವೈಶಾಖ), ಗ್ರೀಷ್ಮ (ಜೇಷ್ಠ-ಆಷಾಢ), ವರ್ಷಾ (ಶ್ರಾವಣ-ಭಾದ್ರಪದ),ಶರದ (ಅಶ್ವಿನ-ಕಾರ್ತಿಕ), ಹೇಮಂತ (ಮಾರ್ಗಶಿರ-ಪೌಷ),  ಶಿಶಿರ (ಮಾಘ-ಫಾಲ್ಗುಣ).

ದಿಕ್ಕುಗಳು (10)
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ವಾಯವ್ಯ, ನೈಋತ್ಯ, ಆಕಾಶ,  ಪಾತಾಳ.

ಸಂಸ್ಕಾರಗಳು (16)
ಗರ್ಭಧಾನ, ಪುಂಸವನ, ಸೀಮನ್ತೋತ್ರಯನ, ಜಾತಕರ್ಮ, ನಾಮಕರಣ, ನಿಷಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಕರ್ಣಭೇದ, ಯಜ್ಞೋಪವೀತ, ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ, ಆವಸಥ್ಯಧಾನ, ಶ್ರೌತಧಾನ. (ಕುಂದಾಪ್ರ ಡಾಟ್ ಕಾಂ ನೋಡಿ)

ಸಪ್ತ ಋಷಿಗಳು (7)
ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ.

ಸಪ್ತಪರ್ವತಗಳು:
ಹಿಮಾಲಯ (ಉತ್ತರ ಭಾರತ), ಮಲಯ (ಕರ್ನಾಟಕ ಮತ್ತು ತಮಿಳನಾಡು), ಸಹ್ಯಾದ್ರೀ (ಮಹಾರಾಷ್ಟ್ರ), ಮಹೇಂದ್ರ (ಉಡಿಸಾ), ವಿಂಧ್ಯಾಚಲ (ಮಧ್ಯಪ್ರದೇಶ), ಅರವಲೀ (ರಾಜಸ್ಥಾನ), ರೈವತಕ (ಗಿರನಾರ-ಗುಜರಾತ)

ಜ್ಯೋತಿರ್ಲಿಂಗಗಳು (12)
ಸೋಮನಾಥ ನಾಗೇಶ (ಗುಜರಾಥ), ಮಲ್ಲಿಕಾರ್ಜುನ (ಆಂಧ್ರಪ್ರದೇಶ), ರಾಮೇಶ್ವರ (ತಮಿಳನಾಡು), ಮಹಾಕಾಲೇಶ್ವರ (ಉಜ್ಜೈನ), ಓಂಕಾರೇಶ್ವರ (ಮಧ್ಯಪ್ರದೇಶ) ಕೇದಾರನಾಥ (ಉತ್ತರಾಂಚಲ), ವಿಶ್ವನಾಥ (ಉತ್ತರ ಪ್ರದೇಶ), ಪರಳೀ ವೈಜನಾಥ, ತ್ರ್ಯಂಬಕೇಶ್ವರ ,
ಘೃಷ್ಣೇಶ್ವರ, ಭೀಮಾಶಂಕರ (ಎಲ್ಲ ಮಹಾರಾಷ್ಟ್ರ). (ಕುಂದಾಪ್ರ ಡಾಟ್ ಕಾಂ ನೋಡಿ)

ಪೀಠಗಳು (4)
ಶಾರದಾಪೀಠ (ದ್ವಾರಕಾ-ಗುಜರಾತ), ಜ್ಯೋತಿಷ್ಪೀಠ (ಜೋಶೀಮಠ- ಉತ್ತರಾಂಚಲ), ಗೋವರ್ಧನಪೀಠ(ಜಗನ್ನಾಥಪುರೀ- ಉಡೀಸಾ), ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)

ಚಾರಧಾಮಗಳು:
ಬದ್ರಿನಾಥ (ಉತ್ತರಾಂಚಲ), ರಾಮೇಶ್ವರಮ (ತಮಿಳನಾಡು), ದ್ವಾರಿಕಾ (ಗುಜರಾತ), ಜಗನ್ನಾಥಪುರೀ (ಉಡೀಸಾ).

ಸಪ್ತಪುರಿಗಳು:
ಅಯೋಧ್ಯಾ, ಮಥುರಾ, ಕಾಶಿ (ಎಲ್ಲ ಉತ್ತರ ಪ್ರದೇಶ), ಹರಿದ್ವಾರ (ಉತ್ತರಾಂಚಲ), ಕಾಂಚೀಪುರಂ (ತಮಿಳನಾಡು), ಅವಂತಿಕಾ (ಉಜ್ಜೈನ – ಮ.ಪ್ರ.), ದ್ವಾರಿಕಾ (ಗುಜರಾಥ). (ಕುಂದಾಪ್ರ ಡಾಟ್ ಕಾಂ ನೋಡಿ)

ಚಾರಕುಂಭಗಳು:
ಹರಿದ್ವಾರ (ಉತ್ತರಖಂಡ), ಪ್ರಯಾಗ (ಉತ್ತ ಪ್ರದೇಶ), ಉಜ್ಜೈನ (ಮಧ್ಯ ಪ್ರದೇಶ), ನಾಶಿಕ(ಮಹಾರಾಷ್ಟ್ರ)

ಪವಿತ್ರ-ಸ್ಮರಣೀಯ ನದಿಗಳು :
ಗಂಗಾ, ಕಾವೇರಿ, ಯಮುನಾ, ಸರಸ್ವತೀ, ನರ್ಮದಾ, ಮಹಾನದೀ, ಗೋದಾವರೀ, ಕೃಷ್ಣಾ , ಬ್ರಹ್ಮಪುತ್ರಾ.

ಅಷ್ಟ ಲಕ್ಷ್ಮೀಯರು:
ಆದಿಲಕ್ಷ್ಮೀ, ವಿದ್ಯಾಲಕ್ಷ್ಮೀ, ಸೌಭಾಗ್ಯಲಕ್ಷ್ಮೀ, ಅಮೃತಲಕ್ಷ್ಮೀ, ಕಾಮಲಕ್ಷ್ಮೀ, ಸತ್ಯಲಕ್ಷ್ಮೀ, ಭೋಗಲಕ್ಷ್ಮೀ, ಯೋಗಲಕ್ಷ್ಮೀ.

ಯುಗಗಳು(4)
ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ.

ಪುರುಷಾರ್ಥ (4)
ಧರ್ಮ , ಅರ್ಥ , ಕಾಮ , ಮೋಕ್ಷ.

ಪ್ರಕೃತಿಯ ಗುಣಗಳು (3)
ಸತ್ವ, ರಜ, ತಮ.

ನಕ್ಷತ್ರಗಳು (25)
ಅಶ್ವನೀ, ಭರಣೀ, ಕೃತಿಕಾ, ರೋಹಿಣೀ, ಮೃಗ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮೇಘಾ, ಪೂರ್ವಾಫಾಲ್ಗುನೀ, ಉತ್ತರಾ ಫಾಲ್ಗುನೀ, ಹಸ್ತ, ಚಿತ್ರಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠ, ಮೂಲ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರಾವಣ, ಘನಿಷ್ಠಾ, ಶತತಾರಕಾ, ಪೂರ್ವಾಭಾದ್ರಪದಾ, ಉತ್ತರಾಭಾದ್ರಪದಾ, ರೇವತೀ, ಅಭಿಜಿತ. (ಕುಂದಾಪ್ರ ಡಾಟ್ ಕಾಂ ನೋಡಿ)

ದಶಾವತಾರ (10)

ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ

Exit mobile version