Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಯುವ ನಿಧಿ ಯೋಜನೆಯ ಬ್ಯಾನರ್ ಹಾಗೂ ಪೋಸ್ಟರ್‌ ಹಸ್ತಾಂತರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಕರ್ನಾಟಕ ರಾಜ್ಯ ಸರಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ “ಯುವ ನಿಧಿ” ಯೋಜನೆಯ ಮಾಹಿತಿಯ ಬ್ಯಾನರ್ ಹಾಗೂ ಪೋಸ್ಟರ್‌ನ್ನು ಹಸ್ತಾಂತರಿಸಲಾಯಿತು. ಈ ಬ್ಯಾನರನ್ನು ಗ್ರಾಮ ಪಂಚಾಯತಿ ಆವರಣದಲ್ಲಿ ಅಳವಡಿಸಲಾಗಿದೆ. ಹಾಗೂ 2024-25 ನೇ ಸಾಲಿನ “ಯುವ ನಿಧಿ”ಯ ನೊಂದಣಿ ಅಭಿಯಾನವನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಸಲು ಅನುಮತಿಯನ್ನು ಕೋರಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಕುಂದಾಪುರ ತಾಲೂಕು ಸದಸ್ಯರಾದ ಝಹೀರ್ ನಾಖುದಾ ಗಂಗೊಳ್ಳಿ, ಗ್ರಾಮ ಪಂಚಾಯತ್ ನ ಕಾರ್ಯದರ್ಶಿಯಾದ ಅನೂಪ್ ಶೇಟ್, ಸಿಬ್ಬಂದಿಗಳಾದ ಸಂದೀಪ್, ಕಾರ್ತಿಕ್, ರಂಜಿತ್, ನಫೀಜ್, ಸುನಿಲ್, ಭಾಗ್ಯ, ಚೈತ್ರ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version