Site icon Kundapra.com ಕುಂದಾಪ್ರ ಡಾಟ್ ಕಾಂ

ಸುರಭಿ ರಿ. ಬೈಂದೂರು: ರಾಜ್ಯ ಮಟ್ಟದ “ಕಥಾ ಸ್ಪರ್ಧೆ”ಯ ಬ್ರೊಶರ್ ಅನಾವರಣ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಕಲಾಸಂಸ್ಥೆಯಾದ ಸುರಭಿ ರಿ. ಬೈಂದೂರು ಇದರ ಬೆಳ್ಳಿ ಹಬ್ಬದ ವರ್ಷದ ಅಂಗವಾಗಿ “ರಜತಯಾನ-2025” ಇದರ ಸವಿ ನೆನಪಿಗಾಗಿ ರಾಜ್ಯ ಮಟ್ಟದಲ್ಲಿ ನಡೆಸುತ್ತಿರುವ ಕಥಾ ಸ್ಪರ್ಧೆಯ ಸ್ಪರ್ಧಾ ನೀತಿಯನ್ನೊಳಗೊಂಡ ಮಾಹಿತಿ ಪತ್ರದ ಬಿಡುಗಡೆ ಸಮಾರಂಭವನ್ನು ನಡೆಸಲಾಯಿತು.

ಉದ್ಘಾಟಕರಾಗಿ ಆಗಮಿಸಿದ ಉಡುಪಿ ಜಿಲ್ಲಾ ಕ.ಸಾ.ಪ.ದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅವರು ಮಾತನಾಡಿ, ಪ್ರಸ್ತುತ ವ್ಯವಸ್ಥೆಯಲ್ಲಿ ಕಥಾಸ್ಪರ್ಧೆಯ ಅಗತ್ಯತೆ ಬಗ್ಗೆ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸಾಹಿತ್ಯದ ಪಾತ್ರವನ್ನು ತಿಳಿಸಿದರು.

ಸುರಭಿ ರಿ ಬೈಂದೂರು ಅಧ್ಯಕ್ಷ ಆನಂದ ಮದ್ದೂಡಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದು, ಕಥಾಸ್ಪರ್ಧೆಯ ಬಗ್ಗೆಮಾಹಿತಿ ನೀಡಿದರು. ವೇದಿಕೆಯಲ್ಲಿ ಸುರಭಿಯ ರಂಗ ನಿರ್ದೇಶಕ ಗಣೇಶ್ ಮಂದಾರ್ತಿ, ಖಜಾಂಚಿ ರಾಘವೇಂದ್ರ ಕೆ. ಉಪಸ್ಥಿತರಿದ್ದರು.

ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ನಿರೂಪಿಸಿದರು.

Exit mobile version