Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಚಾಕಲೇಟ್ ನೀಡಿ ರೈಲು ಪ್ರಯಾಣಿಕನ 4.86ಲಕ್ಷ ಮೌಲ್ಯದ ಚಿನ್ನಾಭರಣ-ನಗದು ಕಳವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಕಾರವಾರದಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಅಮಲುಭರಿತ ಚಾಕಲೇಟ್ ನೀಡಿ 4.86 ಲಕ್ಷ ಮೌಲ್ಯದ ಚಿನ್ನಾಭರಣ ನಗದು ದೋಚಿದ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆ.10 ರಂದು ಬಂಟ್ವಾಳದ ಹರೀಶ ಎಂಬವರು ಕಾರವಾರದಿಂದ ಮಂಗಳೂರಿಗೆ ರೈಲಿನಲ್ಲಿ ಬರುವ ಸಂದರ್ಭದಲ್ಲಿ ಅಪರಿಚಿತ 35 ವರ್ಷದ ವ್ಯಕ್ತಿ ಭಟ್ಕಳದಿಂದ ಬಂದಿದ್ದ. ತನ್ನ ಪರಿಚಯ ಮಾಡಿಕೊಂಡು ಈ ಅಪರಿಚಿತ ವ್ಯಕ್ತಿ ಚಾಕಲೇಟ್ ನೀಡಿದ್ದನು. ಇದರಿಂದ ನಿದ್ದೆಗೆ ಜಾರಿದ ಹರೀಶ್ ಬೆಳಿಗ್ಗೆ ಎದ್ದು ನೋಡುವಾಗ ಕುತ್ತಿಗೆಯಲ್ಲಿದ್ದ ಸುಮಾರು 28 ಗ್ರಾಂ ತೂಕದ ರೂ 2,35,000 ಬೆಲೆಯ ಸರ, 08 ಗ್ರಾಂ ತೂಕದ ರೂ 70,000/- ಬೆಲೆಯ ಉಂಗುರ, Fast track watch ಬೆಲೆ ಸುಮಾರು 3500/-,ಮೊಬೈಲ್ ಒನ್ ಪ್ಲಸ್ ಸಿಮ್ ನಂ 9686675271 ಬೆಲೆ ಸುಮಾರು 28,000, ಶರ್ಟ ಜೇಬಿನಲ್ಲಿದ್ದ ರೂ 5000 ನಗದು ಮತ್ತು ಬ್ಯಾಗಿನಲ್ಲಿದ್ದ ರೂ 1,45,000/- ನಗದು ಒಟ್ಟು ಮೊತ್ತ 4,86,500/- ರೂ ಮೌಲ್ಯದ ವಸ್ತುಗಳನ್ನು ದೋಚಿರುವ ಬಗ್ಗೆ ದೂರು ನೀಡಿದ್ದಾರೆ.

Exit mobile version