Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಎಂಐಟಿ ಮತ್ತು ಎಂಎಸ್‌ಡಿಸಿ ಮಣಿಪಾಲ ಶೈಕ್ಷಣಿಕ ಒಡಂಬಡಿಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಎಂಐಟಿ ಕುಂದಾಪುರ ಮತ್ತು ಎಂಎಸ್‌ಡಿಸಿ ಮಣಿಪಾಲ ಸಂಸ್ಥೆಗಳು ಪ್ರಸ್ತುತ ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗಾಗಿ, ಉದ್ಯಮದ ಅವಶ್ಯಕತೆಗಳಿಗೆ ತಕ್ಕಂತೆ  ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಸಹಯೋಗದೊಂದಿಗೆ ಕೆಲಸ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದವು.

ಎಂಎಸ್‌ಡಿಸಿ ಮಣಿಪಾಲ ಅಧ್ಯಕ್ಷ ಬ್ರಿಗೇಡಿಯರ್ ಡಾ. ಸುರ್ಜಿತ್ ಸಿಂಗ್ ಪಬ್ಲಾ ಮತ್ತು ಐಎಂಜೆ  ವಿದ್ಯಾ ಸಂಸ್ಥೆಗಳ  ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ, ಡಾ. ಇಂದ್ರವಿಜಯ ಸಿಂಗ್ ಡೀನ್ ಮತ್ತು ವಿಭಾಗ ಮುಖ್ಯಸ್ಥರು ಎಐಎಂಎಲ್ ವಿಭಾಗ ಎಂಐಟಿ ಕುಂದಾಪುರ ಮತ್ತು ಎಂಎಸ್‌ಡಿಸಿ ಮಣಿಪಾಲದ ಅಧಿಕಾರಿಗಳಾದ ಡಾ. ಅಂಜಯ್ಯ ದೇವಿನೇನಿ, ಡಾ. ಎ ಗಣೇಶ್, ಪ್ರೊ. ನಾಗರಾಜ್, ಡಾ. ರಾಮಸ್ವಾಮಿ, ಪ್ರೊ. ಮಂಗಳಾ ಕೆ.  ಉಪಸ್ಥಿತರಿದ್ದರು.

Exit mobile version